Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಬೆಡ್‌ಗಾಗಿ ಮುಂದುವರೆದ ಹಾಹಾಕಾರ | ಬೆಡ್ ಸಿಗದೆ ಸಿಎಂ ನಿವಾಸಕ್ಕೆ ಸೋಂಕಿತನನ್ನು ಕರೆತಂದ ಕುಟುಂಬಸ್ಥರು!

ಬೆಂಗಳೂರಿನಲ್ಲಿ ಬೆಡ್‌ಗಾಗಿ ಮುಂದುವರೆದ ಹಾಹಾಕಾರ | ಬೆಡ್ ಸಿಗದೆ ಸಿಎಂ ನಿವಾಸಕ್ಕೆ ಸೋಂಕಿತನನ್ನು ಕರೆತಂದ ಕುಟುಂಬಸ್ಥರು!

ಬೆಂಗಳೂರು : ಬೆಂಗಳೂರಿನಲ್ಲಿ ಕೊರೋನಾ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಸೋಂಕಿತರ ಸಂಖ್ಯೆಯ ಹೆಚ್ಚಳದಿಂದಾಗಿ ಆಸ್ಪತ್ರೆಯಲ್ಲಿ ಬೆಡ್ ಕೂಡಾ ಸಿಗದೆ ಜನತೆ ಪರದಾಡುತ್ತಿದ್ದಾರೆ. ಈ ನಡುವೆ ನಗರದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಗೆ ಬೆಡ್ ಸಿಗದೇ ಇದ್ದ ಕಾರಣ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸ ಕಾವೇರಿಯ ಮುಂದೆಯೇ ಕರೆತಂದು ಕುಟುಂಬಸ್ಥರು ಬೆಡ್ ಕೊಡಿಸುವಂತೆ ಆಗ್ರಹಿಸಿದ ಘಟನೆ ನಡೆದಿದೆ.

ನಗರದೆಲ್ಲೆಡೆ ಬೆಳಿಗ್ಗೆಯಿಂದ ಸುತ್ತಾಡಿದರೂ ಬೆಡ್ ಸಿಗದ ಕಾರಣ ಮುಖ್ಯಮಂತ್ರಿಗಳ ನಿವಾಸಕ್ಕೆ ಸೋಂಕಿತ ವ್ಯಕ್ತಿಯನ್ನು ಬೆಡ್ ಕೊಡಿಸುವಂತೆ ಕುಟುಂಬಸ್ಥರು ಕರೆತಂದಿದ್ದು, ಹೀಗೆ ಬೆಡ್ ಗಾಗಿ ಒತ್ತಾಯಿಸಿದ ಸೋಂಕಿತನನ್ನು ಪೊಲೀಸರು ಯಾವುದೇ ಬೆಡ್ ವ್ಯವಸ್ಥೆ ಮಾಡದೇ ಅಲ್ಲಿಂದ ಕಳುಹಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಬೆಡ್ ಸಿಗದೇ ಕೊರೋನಾ ಸೋಂಕಿತನನ್ನು ವಿಧಾನಸೌಧದ ಮುಂದೆ ಕರೆತಂದಿದ್ದಲ್ಲದೇ, ಸಿಎಂ ಯಡಿಯೂರಪ್ಪ ನಿವಾಸದ ಮುಂದೆಯೂ ಸೋಂಕಿತ ವ್ಯಕ್ತಿಯೊಬ್ಬ ಬೆಡ್ ಸಿಗದೇ ನರಳಾಡಿದ್ದ ಘಟನೆ ನಡೆದಿತ್ತು.

Join Whatsapp
Exit mobile version