ಬೀದರ್: ಕೆಲ ದಿನಗಳ ಹಿಂದಷ್ಟೇ ಬೀದರ್ ಜಿಲ್ಲೆಯಲ್ಲಿ ಭೂಕಂಪನ ಅನುಭವ ಆಗಿತ್ತು. ಈಗ ಮತ್ತೆ ಲಘು ಭೂಕಂಪನ ಉಂಟಾಗಿದ್ದು ಜನರು ಭಯಭೀತಗೊಂಡಿದ್ದಾರೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ವಡ್ಡನಕೇರಾ, ಮದರಗಾಂವ್ ಗ್ರಾಮಗಳಲ್ಲಿ ಮತ್ತೆ ಭೂ ಕಂಪನದ ಅನುಭವವಾಗಿದೆ. ಈ ಬಗ್ಗೆ ಬೀದರ್ ಕೆ ಎಸ್ ಎನ್ ಡಿಎಂಸಿ ಮಾಹಿತಿ ನೀಡಿದ್ದು, ರಿಕ್ಟರ್ ಮಾಪಕನದಲ್ಲಿ 2.4 ತೀವ್ರತೆಯಲ್ಲಿ ಭೂಕಂಪನ ದಾಖಲಾಗಿದೆ ಎಂದು ಹೇಳಿದೆ.
ಬೀದರ್ ಜಿಲ್ಲೆಯಲ್ಲಿ ಈ ಹಿಂದೆ ಹಲವು ಭಾರೀ ಭೂ ಕಂಪನ ಉಂಟಾಗಿತ್ತು. ಈಗ ಮತ್ತೆ ವಡ್ಡನಕೇರಾ, ಮದರಗಾಂವ್ ಗ್ರಾಮಗಳಲ್ಲಿ ಲಘು ಭೂಕಂಪನ ಉಂಟಾಗಿದ್ದು, ಜನರು ಭಯ ಭೀತಗೊಂಡಿದ್ದಾರೆ.