Home ಟಾಪ್ ಸುದ್ದಿಗಳು ತಿಂಗಳ ಆರಂಭದಲ್ಲೇ ಗ್ರಾಹಕರಿಗೆ ಶಾಕ್: ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಏರಿಕೆ

ತಿಂಗಳ ಆರಂಭದಲ್ಲೇ ಗ್ರಾಹಕರಿಗೆ ಶಾಕ್: ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಏರಿಕೆ

ನವದೆಹಲಿ: ಅಕ್ಟೋಬರ್ ತಿಂಗಳ ಆರಂಭದಲ್ಲೇ ಗ್ರಾಹಕರಿಗೆ ತೈಲ ಕಂಪನಿಗಳು ಶಾಕ್ ನೀಡಿದ್ದು, ಎಲ್ ಪಿಜಿ ಸಿಲಿಂಡರ್ ದರದಲ್ಲಿ 43.50 ರೂಪಾಯಿ ಹೆಚ್ಚಿಸಲಾಗಿದೆ. ಈ ನಡುವೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.


ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 1,693 ರೂಪಾಯಿಯಿಂದ 1,736.50 ರೂಪಾಯಿಗೆ ಏರಿದೆ. ಆದರೆ 14.2 ಕೆ.ಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇತ್ತ ಕೋಲ್ಕತ್ತಾದಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆ 1,770.50 ರೂಪಾಯಿಯಿಂದ 1,805.50 ರೂಪಾಯಿಗೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಂಪೆನಿ ತಿಳಿಸಿದೆ.

Join Whatsapp
Exit mobile version