Home ಟಾಪ್ ಸುದ್ದಿಗಳು ಶಿವಮೊಗ್ಗ: ಹಿಂಸಾಚಾರದ ವೇಳೆ ಮುಸ್ಲಿಮ್ ಯುವಕನ ಮೇಲೂ ಚಾಕು ಇರಿತ: ದೂರು ದಾಖಲು

ಶಿವಮೊಗ್ಗ: ಹಿಂಸಾಚಾರದ ವೇಳೆ ಮುಸ್ಲಿಮ್ ಯುವಕನ ಮೇಲೂ ಚಾಕು ಇರಿತ: ದೂರು ದಾಖಲು

ಶಿವಮೊಗ್ಗ: ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ನಿಗೆ ಚಾಕು ಇರಿದ ವೇಳೆ ಮುಸ್ಲಿಂ ಯುವಕನಿಗೂ ಚಾಕು ಇರಿಯಲಾಗಿದೆ ಎಂದು ತಿಳಿದು ಬಂದಿದೆ. 

ಶಿವಮೊಗ್ಗದ ಜೆಪಿ ನಗರದ ಸದ್ದಾಂ ಹುಸೇನ್.ಎಂ ಜಮಖಂಡಿ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಯುವಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಗಲಾಟೆ ಹಿನ್ನೆಲೆ ಯುವಕ ಅಂಗಡಿ ಕ್ಲೋಸ್ ಮಾಡಿಕೊಂಡು ಹೋಗುತ್ತಿದ್ದನು. ಈ ವೇಳೆ ಗಾಂಧಿ ಬಜಾರ್ ನ ಉಪ್ಪಾರಕೇರಿ ಕ್ರಾಸ್ ನಲ್ಲಿ ಏಕಾಏಕಿ ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. 10 ರಿಂದ 12 ಜನರ ಯುವಕರ ಗುಂಪಿನಿಂದ ಸದ್ದಾಂ ಹುಸೇನ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹಲ್ಲೆಗೊಳಗಾದ ಸದ್ದಾಂ ಆಸ್ಪತ್ರೆಗೆ ದಾಖಲಾಗಿ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾನೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Join Whatsapp
Exit mobile version