Home ಟಾಪ್ ಸುದ್ದಿಗಳು ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಕ್ಷಮಾಪಣೆ: ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದ ಚಿದಂಬರಂ

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಕ್ಷಮಾಪಣೆ: ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದ ಚಿದಂಬರಂ

ನವದೆಹಲಿ: ಗುಜರಾತ್’ನಲ್ಲಿ ಬಿಲ್ಕಿಸ್ ಬಾನು ಅಪರಾಧಿಗಳಿಗಳನ್ನು ಹೂಹಾರ ಹಾಕಿ ಸ್ವಾಗತಿಸಿ ಬಿಡುಗಡೆಗೊಳಿಸಿದ ಸರ್ಕಾರದ ನಡೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ತರಾಟೆಗೆ ತೆಗೆದಿದ್ದಾರೆ.

ಮಹಿಳೆಯರನ್ನು ಗೌರವಿಸುವಂತೆ ಪ್ರಧಾನಿ ಮೋದಿ ಅವರು ಜನರಿಗೆ ಸೂಚಿಸಿದ ಕೆಲವೇ ಗಂಟೆಗಳ ಬಳಿಕ ಗುಜರಾತ್ ಸರ್ಕಾರವು ಸಾಮೂಹಿಕ ಅತ್ಯಾಚಾರದ ಅಪರಾಧಿಗಳನ್ನು ಇನ್ನುಳಿದ ಶಿಕ್ಷೆಯಿಂದ ಪಾರು ಮಾಡಿದೆ ಎಂದು ಚಿದಂಬರಂ ತಿಳಿಸಿದರು. ಗುಜರಾತ್ ಸರ್ಕಾರದ ಉದ್ದೇಶಿತ ಕ್ರಮದ ಬಗ್ಗೆ ಪ್ರಧಾನಿಗೆ ತಿಳಿದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಎಲ್ಲಾ 11 ಅಪರಾಧಿಗಳನ್ನು ಗೋಧ್ರಾ ಸಬ್ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಗುಜರಾತ್ ಸರ್ಕಾರ ಪರ್ಯಾಯ ನೀತಿಯ ಅಡಿಯಲ್ಲಿ ಅವರನ್ನು ಬಿಡುಗಡೆಗೊಳಿಸಲು ಅವಕಾಶ ಮಾಡಿಕೊಟ್ಟಿತ್ತು.

Join Whatsapp
Exit mobile version