Home ಟಾಪ್ ಸುದ್ದಿಗಳು ಶಿವಮೊಗ್ಗ:  ಆಟೋ ಚಾಲಕನ ಬರ್ಬರ ಹತ್ಯೆ

ಶಿವಮೊಗ್ಗ:  ಆಟೋ ಚಾಲಕನ ಬರ್ಬರ ಹತ್ಯೆ

ಶಿವಮೊಗ್ಗ:  ಆಟೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ  ಘಟನೆ ಭದ್ರಾವತಿಯ ಆರ್.ಎಂ.ಸಿ ಯಾರ್ಡ್ ಬಳಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಹೊಳೆಹೂನ್ನೂರು ಪಟ್ಟಣದ ಗಾಣಿಗರ ಬೀದಿಯ ನಿವಾಸಿ ರೂಪೇಶ್ ಕುಮಾರ್ (45) ಎಂದು ಗುರುತಿಸಲಾಗಿದೆ. ಮೃತದೇಹದ ಪಕ್ಕದಲ್ಲಿ ರಕ್ತಸಿಕ್ತವಾದ ದೊಣ್ಣೆ ಪತ್ತೆಯಾಗಿದ್ದು,  ದೊಣ್ಣೆಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಶಂಕೆ ಇದೆ.

ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತ, ಇತ್ತೀಚೆಗೆ ಊರಿನಲ್ಲೇ  ದುಡಿಯುತ್ತಿದ್ದು,  ಶಿವಮೊಗ್ಗದ ನಾರಾಯಣ ಹೃದಯಾಲಯದ ಬಳಿ ಆಟೋ ಓಡಿಸುತ್ತಿದ್ದ.

ಘಟನೆ ಸಂಬಂಧ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆ ಬಗ್ಗೆ ಯಾವುದೇ ನಿಖರ ಮಾಹಿತಿಗಳು ದೊರಕಿಲ್ಲ. ಪೊಲೀಸ್ ತನಿಖೆಯ ಬಳಿಕ ಹೆಚ್ಚಿನ ಮಾಹಿಯನ್ನು ನಿರೀಕ್ಷಿಸಲಾಗಿದೆ.

Join Whatsapp
Exit mobile version