Home ಟಾಪ್ ಸುದ್ದಿಗಳು ಏಕನಾಥ್ ಶಿಂಧೆ ಬಣದ 22 ಶಾಸಕರು ಬಿಜೆಪಿ ಸೇರಲಿದ್ದಾರೆ: ಉದ್ಧವ್ ಠಾಕ್ರೆ ಗುಂಪು ಭವಿಷ್ಯ

ಏಕನಾಥ್ ಶಿಂಧೆ ಬಣದ 22 ಶಾಸಕರು ಬಿಜೆಪಿ ಸೇರಲಿದ್ದಾರೆ: ಉದ್ಧವ್ ಠಾಕ್ರೆ ಗುಂಪು ಭವಿಷ್ಯ

ಮುಂಬೈ: ಶಿವಸೇನೆಯ 40 ಶಾಸಕರ ಪೈಕಿ ಶಿಂಧೆ ಬಣದ 22 ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಪಕ್ಷಾಂತರಗೊಳ್ಳಲಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ತಿಳಿಸಲಾಗಿದೆ. ಸಾಮ್ನಾದ ಸಾಪ್ತಾಹಿಕ ಅಂಕಣದಲ್ಲಿ ಏಕನಾಥ್ ಶಿಂಧೆ ಅವರನ್ನು ಬಿಜೆಪಿ ಪಕ್ಷವು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನೇಮಿಸಿದ್ದು ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದು ಹೇಳಿದೆ.

ಶಿಂಧೆ ಅವರ ಮುಖ್ಯಮಂತ್ರಿ ಹುದ್ದೆಯನ್ನು ಯಾವಾಗ ಬೇಕಾದರೂ ಬಿಜೆಪಿ ಕಿತ್ತುಕೊಳ್ಳಬಹುದು ಎಂದು ಈಗ ಎಲ್ಲರಿಗೂ ಅರ್ಥವಾಗ ತೊಡಗಿದೆ. ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಶಿಂಧೆ ಅವರ ಬಣದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿತ್ತು. ಆದರೆ ಅದನ್ನು ತಪ್ಪಿಸಿದ್ದು ಬಿಜೆಪಿ ಎಂದು ಸಾಮ್ನಾದಲ್ಲಿನ ರೋಕ್’ಥೋಕ್ ಅಂಕಣದಲ್ಲಿ ಉಲ್ಲೇಖಿಸಲಾಗಿದೆ.

ಮಹಾರಾಷ್ಟ್ರದ ಗ್ರಾಮ ಪಂಚಾಯತ್ ಮತ್ತು ಸರಪಂಚ್ ಚುನಾವಣೆಯಲ್ಲಿ ಶಿಂಧೆ ಬಣ ಯಶಸ್ಸು ಸಾಧಿಸಿದೆ ಎಂಬ ಹೇಳಿಕೆ ಸುಳ್ಳು. ಶಿಂಧೆ ಬಣದ ಕನಿಷ್ಠ 22 ಶಾಸಕರು ಅಸಮಾಧಾನಗೊಂಡಿದ್ದಾರೆ. ಶೀಘ್ರದಲ್ಲೇ ಈ ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂದು ಅಂಕಣದಲ್ಲಿ ತಿಳಿಸಲಾಗಿದೆ.

ಶಿಂಧೆ ಅವರನ್ನು ಮಹಾರಾಷ್ಟ್ರದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ಶಿಂಧೆ ಅವರು ತನಗೆ ಮತ್ತು ರಾಜ್ಯಕ್ಕೆ ತುಂಬಾ ಹಾನಿ ಮಾಡಿರುವುದರಿಂದ ಮಹಾರಾಷ್ಟ್ರವು ಅವರನ್ನು ಕ್ಷಮಿಸುವುದಿಲ್ಲ ಎಂದು ಸಾಮ್ನಾದ ಅಂಕಣದಲ್ಲಿ ಪ್ರತಿಪಾದಿಸಲಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ತನ್ನ ಮುಖವಾಣಿಯಲ್ಲಿ ಬಿಜೆಪಿ ಶಿಂಧೆ ಅವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ಮುಂದುವರಿಸಲಿದೆ ಎಂದೂ ಪ್ರತಿಪಾದಿಸಿದೆ.

Join Whatsapp
Exit mobile version