‘ಆಕೆಯ ಮೇಲಾದ ಅತ್ಯಾಚಾರಕ್ಕೆ ಅವಳೇ ಜವಾಬ್ದಾರಳು’: ಆರೋಪಿಗೆ ಜಾಮೀನು ನೀಡಿದ ಅಲಹಾಬಾದ್‌ ಹೈಕೋರ್ಟ್‌

- Advertisement -

ನವದೆಹಲಿ: ಆಕೆಯ ಮೇಲಾದ ಅತ್ಯಾಚಾರಕ್ಕೆ ಅವಳೇ ಜವಾಬ್ದಾರಳು’ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಸಿಂಗ್‌ ವ್ಯಕ್ತಪಡಿಸಿದ ಅಭಿಪ್ರಾಯವಿದು.

- Advertisement -

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಪ್ರಕರಣ ನಡೆದಿತ್ತು. ನೊಯಿಡಾದ ಖ್ಯಾತ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿನಿಯು ತನ್ನ ಇಬ್ಬರು ಸ್ನೇಹಿತೆಯರ ಜೊತೆ ದೆಹಲಿಯಲ್ಲಿರುವ ಬಾರ್‌ ವೊಂದಕ್ಕೆ ತೆರಳಿದ್ದರು. ವಿದ್ಯಾರ್ಥಿನಿಗೆ ಪರಿಚಯದ ವ್ಯಕ್ತಿಯೊಬ್ಬರು ಬಾರ್‌ ನಲ್ಲಿ ಸಿಕ್ಕಿದ್ದರು. ‘ವಿಶ್ರಾಂತಿ’ ಪಡೆಯಲು ತನ್ನ ಮನೆಗೆ ಬರುವಂತೆ ಆ ವ್ಯಕ್ತಿಯು ತುಂಬಾ ಒತ್ತಾಯಿಸಿದ. ಹಾಗಾಗಿ ಆತನ ಜೊತೆಗೆ ಹೋಗಲು ನಾನು ಒಪ್ಪಿಕೊಂಡೆ’ ಎಂದು ವಿದ್ಯಾರ್ಥಿನಿಯು ದೂರಿನಲ್ಲಿ ವಿವರಿಸಿದ್ದಾರೆ.

‘ಆತ ತನ್ನ ಮನೆಗೆ ನನ್ನನ್ನು ಕರೆದುಕೊಂಡು ಹೋಗುವ ಬದಲು ಗುರುಗ್ರಾಮದಲ್ಲಿರುವ ಆತನ ಸಂಬಂಧಿಕರ ಮನೆಯೊಂದಕ್ಕೆ ಕರೆದುಕೊಂಡು ಹೋದ. ಮನೆಗೆ ತೆರಳುವ ವೇಳೆ ನನ್ನನ್ನು ಅಶ್ಲೀಲವಾಗಿ ಮುಟ್ಟಿದ. ಮನೆಗೆ ತೆರಳಿದ ನಂತರ ಅತ್ಯಾಚಾರ ಎಸಗಿದ’ ಎಂದು ಹೇಳಿದ್ದಾರೆ.

- Advertisement -

ಎಫ್‌ ಐಆರ್‌ ದಾಖಲಾದ ಬಳಿಕ ವ್ಯಕ್ತಿಯನ್ನು 2024ರ ಡಿಸೆಂಬರ್‌ ನಲ್ಲಿ ಬಂಧಿಸಲಾಗಿದೆ. ‘ನಾನು ಆಕೆಯ ಮೇಲೆ ಅತ್ಯಾಚಾರ ಎಸಗಿಲ್ಲ. ನಮ್ಮಿಬ್ಬರ ನಡುವೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದಿತ್ತು’ ಎಂದು ಆರೋಪಿಯು ಪೊಲೀಸರಿಗೆ ತಿಳಿಸಿದ್ದಾರೆ.

‘ಮಹಿಳೆಯರ ಸ್ತನಗಳನ್ನು ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರದ ಯತ್ನವಲ್ಲ’ ಎಂದು ಇದೇ ಹೈಕೋರ್ಟ್‌ನ ಇನ್ನೊಬ್ಬ ನ್ಯಾಯಾಮೂರ್ತಿಯೊಬ್ಬರು ಈ ಹಿಂದೆ ತೀರ್ಪು ನೀಡಿದ್ದರು. ಇದು ಭಾರಿ ವಿವಾದವನ್ನೇ ಸೃಷ್ಟಿಸಿತ್ತು.

- Advertisement -


Must Read

Related Articles