Home ಟಾಪ್ ಸುದ್ದಿಗಳು ಶಶಿ ತರೂರ್ ಸ್ಪರ್ಧೆಯಿಂದ ದೇಶ, ಕಾಂಗ್ರೆಸ್ ಅಭಿವೃದ್ಧಿ: ಮಲ್ಲಿಕಾರ್ಜುನ ಖರ್ಗೆ

ಶಶಿ ತರೂರ್ ಸ್ಪರ್ಧೆಯಿಂದ ದೇಶ, ಕಾಂಗ್ರೆಸ್ ಅಭಿವೃದ್ಧಿ: ಮಲ್ಲಿಕಾರ್ಜುನ ಖರ್ಗೆ

ಶ್ರೀನಗರ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷಗಾದಿಗೆ ನಡೆಯುವ ಚುನಾವಣೆಯಲ್ಲಿ ಶಶಿ ತರೂರ್ ಜೊತೆ ತನ್ನ ಸ್ಪರ್ಧೆಯಿಂದ ದೇಶ ಮತ್ತು ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ನೀಡಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷಗಾದಿಗೆ ನಡೆಯುವ ಚುನಾವಣೆಯ ಪ್ರಚಾರದ ಬಳಿಕ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ಇದೊಂದು ಆಂತರಿಕ ಚುನಾವಣೆ. ಮನೆಯ ಅಧಿಕಾರಕ್ಕಾಗಿ ಇಬ್ಬರು ಜಗಳವಾಡದೆ, ಪಕ್ಷದ ಕುರಿತು ಅವರ ನಿಲುವನ್ನು ಪ್ರಕಟಿಸಲು ಯತ್ನಿಸಿದಂತಿದೆ ಎಂದು ತಿಳಿಸಿದರು.

ಪಕ್ಷ ಮತ್ತು ದೇಶಕ್ಕಾಗಿ ನಾವು ಒಂದು ತಂಡವಾಗಿ ಏನೆಲ್ಲಾ ಮಾಡುತ್ತೇವೆ ಎಂಬುವುದರಲ್ಲಿ ಈ ಚುನಾವಣೆ ಮಹತ್ವ ಪಡೆದಿದೆ . ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷ ಮತ್ತು ದೇಶಕ್ಕಾಗಿ ದುಡಿಯಬೇಕಾಗಿದೆ ಎಂದು ಖರ್ಗೆ ಸಲಗೆ ನೀಡಿದರು.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಶಶಿ ತರೂರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಾದಿಗೆ ಸ್ಪರ್ಧಿಸುತ್ತಿದ್ದಾರೆ. ಪ್ರತಿ ರಾಜ್ಯದ ರಾಜಧಾನಿಯಲ್ಲಿ ಈ ತಿಂಗಳ 17ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು, 19ರಂದು ಮತ ಎಣಿಕೆಯ ಬಳಿಕ ಫಲಿತಾಂಶ ಪ್ರಕಟವಾಗಲಿದೆ.

Join Whatsapp
Exit mobile version