ಹೈದರಾಬದ್ : ಗುಜರಾತ್ನಲ್ಲಿ ನವರಾತ್ರಿ ಗರ್ಭಾ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೆಲವು ಮುಸ್ಲಿಂ ವ್ಯಕ್ತಿಗಳನ್ನು ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ ಘಟನೆಯ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.
“ದಾರಿ ತಪ್ಪಿದ ಬೀದಿ ನಾಯಿಗೆ ಭಾರತದ ನೆಲದಲ್ಲಿ ಗೌರವವಿದೆ. ಆದರೆ ಮುಸ್ಲಿಮರಿಗಿಲ್ಲ” ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಆ ಘಟನೆಯ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ ವಿಡಿಯೋವನ್ನು ಎ ಎನ್ ಐ ಸುದ್ದಿ ಸಂಸ್ಥೆಯು ಟ್ವಿಟರ್ ನಲ್ಲಿ ವಿಡಿಯೋ ಹಂಚಿದೆ.
‘ಬಿಜೆಪಿ ಗದ್ದುಗೆಯಲ್ಲಿರುವ ಈ ದೇಶದಲ್ಲಿ ಮುಸ್ಲಿಮರು ತೆರೆದ ಜೈಲಿನಲ್ಲಿ ವಾಸಿಸುತ್ತಿರುವಂತೆ ಭಾಸವಾಗುತ್ತಿದೆʼ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.