Home ಟಾಪ್ ಸುದ್ದಿಗಳು ಜಾಮಿಯಾ ಮಿಲ್ಲಿಯಾ ಹಿಂಸಾಚಾರಕ್ಕೆ ಕುಮ್ಮಕ್ಕು ಆರೋಪ: ಶರ್ಜೀಲ್ ಇಮಾಮ್ ಗೆ ಜಾಮೀನು

ಜಾಮಿಯಾ ಮಿಲ್ಲಿಯಾ ಹಿಂಸಾಚಾರಕ್ಕೆ ಕುಮ್ಮಕ್ಕು ಆರೋಪ: ಶರ್ಜೀಲ್ ಇಮಾಮ್ ಗೆ ಜಾಮೀನು

ನವದೆಹಲಿ: ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ವಿದ್ವಾಂಸ, ಹೋರಾಟಗಾರ ಶರ್ಜೀಲ್ ಇಮಾಮ್ ಅವರಿಗೆ 2019 ರ ಡಿಸೆಂಬರ್ ನಲ್ಲಿ ನಡೆದ ಜಾಮಿಯಾ ಮಿಲ್ಲಿಯಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಕೇತ್ ಜಿಲ್ಲಾ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿದ್ದಾರೆ.

ಗಲಭೆ, ಸ್ವಯಂ ಪ್ರೇರಿತವಾಗಿ ನೋವುಂಟು ಮಾಡುವಿಕೆ, ಆಸ್ತಿಪಾಸ್ತಿಗೆ ಹಾನಿ ಆರೋಪದಲ್ಲಿ ಶರ್ಜೀಲ್ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಅವರ ಮೇಲೆ ದೆಹಲಿ ಇನ್ನೂ ಮೂರು ಪ್ರಕರಣಗಳು ದಾಖಲಾಗಿದ್ದು, ವಿಚಾರಣೆಗೆ ಬಾಕಿಯಿದೆ.

ಶರ್ಜೀಲ್ ಇಮಾಮ್ ಅವರ ಜಾಮೀನು ಮಂಜೂರು ಮಾಡಿದ ಕುರಿತು ಮುಝಮ್ಮಿಲ್ ಎಂಬಾತ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ಶರ್ಜೀಲ್ ಇನ್ನಿತರ ಪ್ರಕರಣಗಳಲ್ಲಿ ಜಾಮೀನು ಲಭಿಸುವರೆಗೂ ಜೈಲಿನಲ್ಲಿಯೇ ಉಳಿಯುವ ಸಾಧ್ಯತೆಯಿದೆ.

Join Whatsapp
Exit mobile version