ದುಬೈ: ಶನಿವಾರ ಮತ್ತು ಭಾನುವಾರದ ಜೊತೆಗೆ ಶುಕ್ರವಾರದಂದು ಕೂಡ ಸಂಪೂರ್ಣ ರಜೆಯನ್ನು ಶಾರ್ಜಾ ಸುಪ್ರೀಂ ಕೌನ್ಸಿಲ್ ಸದಸ್ಯ ಡಾ. ಶೈಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಆದೇಶಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಇತ್ತೀಚೆಗೆ ತನ್ನ ಸರಕಾರಿ ನೌಕರರ ವಾರದ ರಜೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಿದ್ದು, ಜನವರಿ 1 ರಿಂದ ಕಾನೂನು ಜಾರಿಗೆ ಬರಲಿದೆ.
ಈ ಹಿಂದೆ ಯುಎಇಯಲ್ಲಿ ಶುಕ್ರವಾರ ಮತ್ತು ಶನಿವಾರ ಇಡೀ ದಿನ ವಾರದ ರಜಾ ದಿನವಾಗಿತ್ತು. ಹೊಸ ಬದಲಾವಣೆ ನಿಯಮದಿಂದಾಗಿ ಶುಕ್ರವಾರ ಮಧ್ಯಾಹದಿಂದ, ಶನಿವಾರ ಮತ್ತು ಆದಿತ್ಯವಾರ ಇಡೀ ದಿನ, ಹೀಗೆ ಒಟ್ಟು ಎರಡೂವರೆ ದಿನಗಳು ವಾರದ ರಜಾದಿನವಾಗಿ ಬದಲಾಗಿತ್ತು.
ಇದಕ್ಕೆ ವಿರುದ್ಧವಾಗಿ, ಶಾರ್ಜಾ ಸರ್ಕಾರವು ಶುಕ್ರವಾರದಂದು ಪೂರ್ಣ ರಜೆ ಘೋಷಿಸುವ ಮೂಲಕ ಮೂರು ದಿನಗಳ ರಜೆಯನ್ನು ನೀಡಿದೆ.