Home ಕರಾವಳಿ ಶರಣ್ ಪಂಪ್ವೆಲ್ ಗೋಮಾಫಿಯಾ ಮಾಸ್ಟರ್: ಕೆ.ಅಶ್ರಫ್

ಶರಣ್ ಪಂಪ್ವೆಲ್ ಗೋಮಾಫಿಯಾ ಮಾಸ್ಟರ್: ಕೆ.ಅಶ್ರಫ್

0

ಮಂಗಳೂರು: ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ಗೋಮಾಫಿಯಾ ಮಾಸ್ಟರ್ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉಡುಪಿ ದನದ ರುಂಡ ಪ್ರಕರಣದ ಆರೋಪಿಗಳು ಯಾರು ಎಂದು ಪೊಲೀಸರು ಈಗಾಗಲೇ ತನಿಖೆ ನಡೆಸಿ ಜನತೆಗೆ ಮಾಹಿತಿ ನೀಡಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋಮಾಫಿಯ, ಅನೈತಿಕೆ ಚಟುವಟಿಕೆ ಒಳಗೊಂಡು ಬಹುಪಾಲು ದ್ವಿದರ್ಜೆ ವ್ಯವಹಾರಗಳಿಗೆ ವಿಎಚ್ ಪಿ ಡಮ್ಮಿ ಮೇಸ್ತ್ರಿ ಶರಣ್ ಪಂಪ್ವೆಲ್ ನೇ ಕಾರಣ. ಮಾತೆತ್ತಿದರೆ ಇಸ್ಲಾಮಿಕ್ ಜಿಹಾದ್ ಎಂದು ಉಚ್ಚರಿಸುವ ಈತ ಮೊದಲು ತಾನು ನಡೆಸುತ್ತಿರುವ ದಂಧೆ ಬಿಟ್ಟು ಅರ್ಚಕ ಸೇವೆಗೆ ಇಳಿಯಲಿ, ಆ ನಂತರ ಇತರ ದಂಧೆ ವಿಶಯದ ಬಗ್ಗೆ ಪ್ರಸ್ತಾಪಿಸಲಿ. ಇಸ್ಲಾಮಿಕ್ ಜಿಹಾದ್ ಪದ ಬಳಕೆ ಮಾಡದೇ ಇದ್ದರೆ ಈತನ ದಿನ ಬೆಳಗಾಗುವುದಿಲ್ಲ. ಇನ್ನು ಮುಂದೆ ಇಂತಹ ಪದಬಳಕೆ ಮಾಡುವ ಬಗ್ಗೆ ಎಚ್ಚರ ವಹಿಸುವುದು ಒಳಿತು ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version