Home ಟಾಪ್ ಸುದ್ದಿಗಳು ರಾಜೀನಾಮೆ ಹಿಂಪಡೆದ ಬಳಿಕ ಶಾ ಫೈಸಲ್ ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಮರುನೇಮಕ

ರಾಜೀನಾಮೆ ಹಿಂಪಡೆದ ಬಳಿಕ ಶಾ ಫೈಸಲ್ ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಮರುನೇಮಕ

ನವದೆಹಲಿ: ಈ ಹಿಂದೆ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಶಾ ಫೈಸಲ್ ಅವರನ್ನು ಕೇಂದ್ರ ಸರ್ಕಾರ ಮರುನೇಮಕ ಮಾಡಿ ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಎರಡು ದಿನಗಳ ಹಿಂದೆ ಹೊರಡಿಸಿದ ಆದೇಶದಲ್ಲಿ ಫೈಸಲ್ ಅವರನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ನೇಮಿಸಿದೆ ಎಂದು ಡಿಒಪಿಟಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮ್ಮ ರಾಜೀನಾಮೆಯನ್ನು ಹಿಂಪಡೆಯಲು ಫೈಸಲ್ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನಾಲ್ಕು ತಿಂಗಳ ನಂತರ ಮತ್ತು ಏಪ್ರಿಲ್ ನಲ್ಲಿ ಅವರನ್ನು ಸೇವೆಗೆ ಮರುಸ್ಥಾಪಿಸಿದ ನಾಲ್ಕು ತಿಂಗಳ ನಂತರ ಕೇಂದ್ರದ ಈ ಕ್ರಮ ಬಂದಿದೆ.

ಜಮ್ಮು ಮತ್ತು ಕಾಶ್ಮೀರ ಕೇಡರ್ ನ2010 ರ ಬ್ಯಾಚ್ ನ ಐಎಎಸ್ ಟಾಪರ್ ಆಗಿರುವ ಫೈಸಲ್, ಜನವರಿ 2019 ರಲ್ಲಿ ಸೇವೆಗೆ ರಾಜೀನಾಮೆ ನೀಡಿದ್ದರು . ನಂತರ ರಾಜಕೀಯಕ್ಕೆ ಸೇರಿದ್ದು, ಅದಕ್ಕೂ ಅವರು ಆಗಸ್ಟ್ 2020 ರಲ್ಲಿ ರಾಜೀನಾಮೆ ನೀಡಿದ್ದರು.

Join Whatsapp
Exit mobile version