ಜೈಲಿನಲ್ಲಿದ್ದ ಶಾಫಿ ಬೆಳ್ಳಾರೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು!

- Advertisement -

ಬೆಳ್ತಂಗಡಿ: ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎಸ್ ಡಿಪಿಐ ನಾಯಕ ಶಾಫಿ ಬೆಳ್ಳಾರೆ ಅವರನ್ನು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

ಶಾಫಿ ಬೆಳ್ಳಾರೆ ಅವರನ್ನು ಶಿವಮೊಗ್ಗ ಜೈಲಿನಿಂದ ಕರೆತಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.


2014ರಲ್ಲಿ ಪಿಎಫ್ ಐ ಸಂಘಟನೆ ಬೆಳ್ತಂಗಡಿಯಲ್ಲಿ ಹಮ್ಮಿಕೊಂಡಿದ್ದ ಸಾಮರಸ್ಯ ಉಳಿಸೋಣ, ಕೋಮುವಾದ ಆಲಿಸೋಣ ಕಾರ್ಯಕ್ರಮದಲ್ಲಿ ಶಾಫಿ ಬೆಳ್ಳಾರೆ ಭಾಷಣ ಮಾಡಿದ್ದರು. ಶಾಫಿ ಬೆಳ್ಳಾರೆ ಭಾಷಣವು ಪ್ರಚೋದನಕಾರಿಯಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪ್ರಕಾಶ್ ದೇವಾಡಿಗ ದೂರು ನೀಡಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಶಾಫಿ ಬೆಳ್ಳಾರೆ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

- Advertisement -

ಪ್ರಕರಣದ ವಿಚಾರಣೆ ಇಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದಿದ್ದು, ಶಾಫಿ ಬೆಳ್ಳಾರೆ ಅವರನ್ನು ಶಿವಮೊಗ್ಗ ಜೈಲಿನಿಂದ ಕರೆತಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


ಶಾಫಿ ಬೆಳ್ಳಾರೆ 2022ರಲ್ಲಿ ನಡೆದ ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ಎರಡು ವರ್ಷದ ಹಿಂದೆ ಎನ್ ಐಎ ಬಂಧನ ಮಾಡಿ ನ್ಯಾಯಾಂಗ ಬಂಧನ ವಿಧಿಸಿದೆ. ಸದ್ಯ ಅವರು ಶಿವಮೊಗ್ಗ ಜೈಲಿನಲ್ಲಿದ್ದಾರೆ.

- Advertisement -


Must Read

Related Articles