Home ಕರಾವಳಿ ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸೆಯ್ಯದ್ ರೇಹಾ ಖಾದ್ರಿ ಪ್ರಥಮ ‌ರ‍್ಯಾಂಕ್‌‌

ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸೆಯ್ಯದ್ ರೇಹಾ ಖಾದ್ರಿ ಪ್ರಥಮ ‌ರ‍್ಯಾಂಕ್‌‌

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಎಂ.ಎಸ್ಸಿ(ರಸಾಯನಶಾಸ್ತ್ರ) ಸ್ನಾತಕೋತ್ತರ ಪರೀಕ್ಷೆಯಲ್ಲಿ ಉಡುಪಿ ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಸೆಯ್ಯದ್ ರೇಹಾ ಖಾದ್ರಿ 8.65 (ಸಿಜಿಪಿಎ) ಅಂಕಗಳಿಸಿ ಪ್ರಥಮ ರ‍್ಯಾಂಕ್‌‌ನೊಂದಿಗೆ ಚಿನ್ನದ ಪದಕಗಳಿಸಿದ್ದಾರೆ.

ಅಲ್ಲದೆ, ಎಂ.ಪ್ರೀತಿ ಆಚಾರ್ಯ ಮತ್ತು ನಿಧಿ ಎನ್.ಪೈ ಎಂ.ಕಾಂ ಪರೀಕ್ಷೆಯಲ್ಲಿ ಕ್ರಮವಾಗಿ ದ್ವಿತೀಯ ಮತ್ತು ಐದನೇ ರ‍್ಯಾಂಕ್‌ ಗಳಿಸಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

Join Whatsapp
Exit mobile version