Home ಟಾಪ್ ಸುದ್ದಿಗಳು ರೆಸ್ಟೋರೆಂಟ್ ಮಾಲೀಕನ ಮೇಲೆ ಹಲ್ಲೆ ನಡೆಸಿದ ಟಿಎಂಸಿ ಶಾಸಕ, ನಟ ಸೋಹಮ್ ಚಕ್ರವರ್ತಿ

ರೆಸ್ಟೋರೆಂಟ್ ಮಾಲೀಕನ ಮೇಲೆ ಹಲ್ಲೆ ನಡೆಸಿದ ಟಿಎಂಸಿ ಶಾಸಕ, ನಟ ಸೋಹಮ್ ಚಕ್ರವರ್ತಿ

ಕೋಲ್ಕತ್ತಾ: ಬಂಗಾಳಿ ನಟ ಮತ್ತು ತೃಣಮೂಲ ಕಾಂಗ್ರೆಸ್ ಶಾಸಕ ಸೋಹಮ್ ಚಕ್ರವರ್ತಿ ಕೋಲ್ಕತ್ತಾದಲ್ಲಿ ರೆಸ್ಟೋರೆಂಟ್ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯ ವೀಡಿಯೊ ಬಹಿರಂಗವಾಗಿದೆ.

ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿನ ರೆಸ್ಟೋರೆಂಟ್‌ ಮಾಲೀಕ ಆಲಂ ಮಾತನಾಡಿ, ನನ್ನ ರೆಸ್ಟೊರೆಂಟ್‌ನ ಮೇಲಿರುವ ಜಾಗವನ್ನು ಚಕ್ರವರ್ತಿ ಅವರಿಗೆ ಶೂಟಿಂಗ್‌ಗಾಗಿ ಉಚಿತವಾಗಿ ನೀಡಿದ್ದೇನೆ. ಅವರ ಭದ್ರತಾ ಸಿಬ್ಬಂದಿ ನಮ್ಮ ಗ್ರಾಹಕರಿಗೆ ನಿಗದಿಪಡಿಸಿದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಅವುಗಳನ್ನು ಅಲ್ಲಿ ನಿಲ್ಲಿಸಬೇಡಿ ಎಂದು ನಮ್ಮ ಸಿಬ್ಬಂದಿ ಹೇಳಿದ್ದಾರೆ. ಸೋಹಮ್ ಶಾಸಕರಾಗಿದ್ದು, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿಗೆ ಆತ್ಮೀಯ ಎಂದು ಹೇಳಿದ. ಅದಕ್ಕೆ ನಾನು , ಮೋದಿ ಆತ್ಮೀಯರಾದರೂ, ಅಭಿಷೇಕ್ ಬ್ಯಾನರ್ಜಿ ಆತ್ಮೀಯನಾದರೂ ನನಗೆ ಯಾವುದೇ ಭಯವಿಲ್ಲ ಎಂದು ನಾನು ಉತ್ತರಿಸಿದ್ದೆ. ಅಷ್ಟಕ್ಕೆ ಸೋಹಮ್ ಬಂದು ನನ್ನ ಮುಖಕ್ಕೆ ಹೊಡೆದು ಕಾಲಿನಿಂದ ಒದ್ದಿದ್ದಾರೆ ಎಂದು ಹೇಳಿದ್ದಾರೆ.

ಹೊಡೆದಿದ್ದನ್ನು ಒಪ್ಪಿಕೊಂಡ ನಟ

ಹೋಟೆಲ್ ಮಾಲೀಕರನ್ನು ಥಳಿಸಿರುವುದನ್ನು ತೃಣಮೂಲ ಶಾಸಕ ಪ್ಪಿಕೊಂಡಿದ್ದಾರೆ. ಜೋರಾಗಿ ಕೂಗಾಟ ಕೇಳಿದ ತಕ್ಷಣ ನಾನು ಕೆಳಗೆ ಬಂದೆ. ರೆಸ್ಟೋರೆಂಟ್ ಮಾಲೀಕರು ನನ್ನ ಸಿಬ್ಬಂದಿಯನ್ನು ನಿಂದಿಸುತ್ತಿರುವುದು ಕಂಡುಬಂತು. ಜೊತೆಗೆ ಅಭಿಷೇಕ್ ಕೂಡ ಬ್ಯಾನರ್ಜಿಯನ್ನು ದೂಷಿಸುತ್ತಿದ್ದರು. ನಾನು ತಾಳ್ಮೆ ಕಳೆದುಕೊಂಡು ಕಪಾಳಮೋಕ್ಷ ಮಾಡಿದೆ ಎಂದು ಸೋಹಮ್ ಒಪ್ಪಿಕೊಂಡಿದ್ದಾರೆ.

ಕೋಲ್ಕತ್ತಾ ಡಿಲೈಟ್ ಮ್ಯಾನೇಜರ್ ದೀಪಂಕರ್ ಘೋಷ್ ಘಟನೆ ಬಗ್ಗೆ ಇನ್ನೂ ಪೊಲೀಸರಿಗೆ ದೂರು ದಾಖಲಿಸಿಲ್ಲ ಎಂದಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ವೀಡಿಯವನ್ನು X ನಲ್ಲಿ ಹಂಚಿದ್ದು, ಮಮತಾ ಬ್ಯಾನರ್ಜಿಯವರ ಪೊಲೀಸರು ಏನನ್ನೂ ಮಾಡುವುದಿಲ್ಲ ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಆಡಳಿತ ಪಕ್ಷದ ಪುಂಡರಿಗೆ ಅಧೀನವಾಗಿದೆ ಎಂದು ಬರೆದಿದೆ.

Join Whatsapp
Exit mobile version