Home ಟಾಪ್ ಸುದ್ದಿಗಳು ‘ಲೈಂಗಿಕ ಪ್ರಚೋದನಕಾರಿ ಉಡುಗೆ’ ಹೇಳಿಕೆ ವಿವಾದ: ವರ್ಗಾವಣೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ನ್ಯಾಯಾಧೀಶ

‘ಲೈಂಗಿಕ ಪ್ರಚೋದನಕಾರಿ ಉಡುಗೆ’ ಹೇಳಿಕೆ ವಿವಾದ: ವರ್ಗಾವಣೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ನ್ಯಾಯಾಧೀಶ

ಕೊಚ್ಚಿ: ವಿವಾದಾತ್ಮಕ ‘ಲೈಂಗಿಕ ಪ್ರಚೋದನಕಾರಿ ಉಡುಗೆ’ ಹೇಳಿಕೆ ನೀಡಿದ್ದ ನ್ಯಾಯಮೂರ್ತಿ ಎಸ್.ಕೃಷ್ಣಕುಮಾರ್ ಅವರು ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಉಚ್ಚ ನ್ಯಾಯಾಲಯದ ಆಡಳಿತಾತ್ಮಕ ವಿಭಾಗವು ಹೊರಡಿಸಿದ ವರ್ಗಾವಣೆ ಆದೇಶದ ವಿರುದ್ಧ ಅವರು ಹೈಕೋರ್ಟ್ ಗೆ ದೂರು ನೀಡಿದ್ದಾರೆ.

ಈ ಹೇಳಿಕೆಯ ನಂತರ ಅವರನ್ನು ಕಳೆದ ಮಂಗಳವಾರ ಕೊಲ್ಲಂ ಲೇಬರ್ ನ್ಯಾಯಾಲಯದ ಪೀಠಾಧಿಪತಿ ಸ್ಥಾನಕ್ಕೆ ಸೆಷನ್ಸ್ ನ್ಯಾಯಾಧೀಶರ ಹುದ್ದೆಯಿಂದ ವರ್ಗಾಯಿಸಲಾಗಿತ್ತು.

ಆಗಸ್ಟ್ 12 ರಂದು ಕೋಝಿಕ್ಕೋಡ್ ಸೆಷನ್ಸ್ ನ್ಯಾಯಾಲಯದಲ್ಲಿ ಎಸ್ ಕೃಷ್ಣಕುಮಾರ್ ಅವರ ಪೀಠವು ಭಾರತೀಯ ದಂಡ ಸಂಹಿತೆಯ (ಲೈಂಗಿಕ ಕಿರುಕುಳ) ಸೆಕ್ಷನ್ 354 ಎ ಅನ್ನು ಮಹಿಳೆ “ಲೈಂಗಿಕ ಪ್ರಚೋದನಾತ್ಮಕ” ಉಡುಪನ್ನು ಧರಿಸಿದ್ದರೆ ಪರಿಗಣಿಸಲಾಗುವುದಿಲ್ಲ ಎಂದು ತನ್ನ ನಿಲುವನ್ನು ವ್ಯಕ್ತಪಡಿಸಿದ ನಂತರ ವಿವಾದ ಭುಗಿಲೆದ್ದಿತು.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ 74 ವರ್ಷದ ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್ ಅವರಿಗೆ ನಿರೀಕ್ಷಣಾ ಜಾಮೀನು ನೀಡುವಾಗ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

Join Whatsapp
Exit mobile version