ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಮಹೇಶ್ ಭಟ್‌ ಗೆ ಜಾಮೀನು ಮಂಜೂರು

- Advertisement -

ಮಂಗಳೂರು: ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ನಲಾದ ಪ್ರಕರಣದಲ್ಲಿ ಮಾಣಿಲದ ಮಹೇಶ್‌ ಭಟ್‌ ಗೆ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.

- Advertisement -

ಮಹೇಶ್‌ ಭಟ್‌ ವಿರುದ್ಧ ಪೋಕ್ಸೋ ಮತ್ತು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಸ್‌.ಟಿ.ಎಸ್‌.ಸಿ.-1 ಪೋಕ್ಸೋ ನ್ಯಾಯಾಲಯ ಸೋಮವಾರ ಷರತ್ತು ಬದ್ಧ ನೀರಿಕ್ಷಣ ಜಾಮೀನನ್ನು ನೀಡಿದೆ.

- Advertisement -

ಆರೋಪಿ ಮಹೇಶ್ ಭಟ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ವಿಶೇಷ ಸರಕಾರಿ ಅಭಯೋಜಕರ, ಅರ್ಜಿದಾರ ಪರ ವಕೀಲರ ಮತ್ತು ಪಿರ್ಯಾದಿದರಾರರು ಮತ್ತಾಕೆಯ ಹೆತ್ತವರನ್ನು ನ್ಯಾಯಾಧೀಶರು ವಿಚಾರಣೆಗೊಳಪಡಿಸಿದ್ದರು.

- Advertisement -


Must Read

Related Articles