Home ಟಾಪ್ ಸುದ್ದಿಗಳು ಹಿಜಾಬ್ ಬಲವಂತದಿಂದ ತೆಗೆಸಿದ ಏಳು ಮಂದಿಯ ಬಂಧನ

ಹಿಜಾಬ್ ಬಲವಂತದಿಂದ ತೆಗೆಸಿದ ಏಳು ಮಂದಿಯ ಬಂಧನ

ಚೆನ್ನೈ: ತಮಿಳುನಾಡಿನ ವೆಲ್ಲೋರ್’ನ ಕೋಟೆ ಸಮುಚ್ಚಯದಲ್ಲಿ ಮಹಿಳೆಯೊಬ್ಬರ ಹಿಜಾಬ್ ಅನ್ನು ತೆಗೆಯುವಂತೆ ಬಲವಂತ ಮಾಡಿದ ಒಬ್ಬ ಅಪ್ರಾಪ್ತನ ಸಹಿತ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
“ಭಾರತೀಯ ದಂಡ ಸಂಹಿತೆ 153ಎ ಮತ್ತು 504 ವಿಧಿಗಳು ಮತ್ತು ತಮಿಳುನಾಡಿನ ಮಹಿಳೆಯರಿಗೆ ಕಿರುಕುಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಒಬ್ಬ ಅಪ್ರಾಪ್ತನ ಸಹಿತ ಏಳು ಮಂದಿಯನ್ನು ಬಂಧಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.


ಬಂಧಿತರ ಮೊಬೈಲ್ ಫೋನ್’ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗೆ ಸೈಬರ್ ವಿಭಾಗಕ್ಕೆ ಕಳುಹಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
“2023ರ ಮಾರ್ಚ್ 22ರಂದು ಓರ್ವ ಪುರುಷ ಮತ್ತು ಒಬ್ಬ ಮಹಿಳೆ ಸಂಜೆ ವೆಲ್ಲೂರ್ ಕೋಟೆ ನೋಡಲು ಬಂದಿದ್ದರು. ಅವರನ್ನು ಕೇಳದೆಯೇ ಒಬ್ಬನು ಅವರ ವೀಡಿಯೋ ಮಾಡಿ ಅವರ ಮೂಲಭೂತ ಹಕ್ಕಿಗೆ ಧಕ್ಕೆ ತಂದಿದ್ಧಾನೆ. ಸೈಬರ್ ಅಪರಾಧ ಪರಿಗಣಿಸಿ ಮೊಕದ್ದಮೆ ದಾಖಲಾಗಿದೆ. ಈ ವೀಡಿಯೋವನ್ನು ಮತ್ತೆ ಹಾಕದಂತೆ ವೆಲ್ಲೂರ್ ಪೊಲೀಸರು ತಾಕೀತು ಮಾಡಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಈ ವೀಡಿಯೋವನ್ನು ಶೇರ್ ಮಾಡಿದವರ ಮೇಲೆ ಐಟಿ ಕಾಯ್ದೆ, ಮಹಿಳೆಯರಿಗೆ ಕಿರುಕುಳ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿಯೂ ಪೊಲೀಸರು ಎಚ್ಚರಿಸಿದ್ದಾರೆ.


ಆಪಾದಿತರು ಮಾಡಿದ್ದ ಆ ಜೋಡಿಯ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಆಪಾದಿತನೊಬ್ಬ ಆ ಜೋಡಿಯನ್ನು ತಡೆದು ಅವರ ಹೆಸರನ್ನು ಕೇಳುವುದು, ಆತನ ಹೆಸರು ಹಿಂದೂ ಆಗಿತ್ತು ಎನ್ನಲಾಗಿದೆ. ಮುಸ್ಲಿಂ ಹೇಗೆ ಹಿಂದೂ ಜೊತೆಗೆ ಬಂದಿದ್ದಾಳೆ ಎಂದು ಬೆದರಿಸಿ ಆಕೆಯ ಹಿಜಾಬ್ ತೆಗೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Join Whatsapp
Exit mobile version