Home ಟಾಪ್ ಸುದ್ದಿಗಳು ಮೋದಿಯ ಪದವಿ ಪ್ರಮಾಣಪತ್ರದ ಬಗ್ಗೆ ಆರ್’ಟಿಐಯಡಿ ಮಾಹಿತಿ ಕೇಳಿದ್ದ ಕೇಜ್ರಿವಾಲ್’ಗೆ 25 ಸಾವಿರ ರೂ. ದಂಡ

ಮೋದಿಯ ಪದವಿ ಪ್ರಮಾಣಪತ್ರದ ಬಗ್ಗೆ ಆರ್’ಟಿಐಯಡಿ ಮಾಹಿತಿ ಕೇಳಿದ್ದ ಕೇಜ್ರಿವಾಲ್’ಗೆ 25 ಸಾವಿರ ರೂ. ದಂಡ

ನವದೆಹಲಿ: ಪ್ರಧಾನಿ ಮೋದಿಯವರ ಪದವಿ ಪ್ರಮಾಣಪತ್ರಗಳನ್ನು ಒದಗಿಸಲು ಆದೇಶಿಸಿ ಪ್ರಧಾನಿ ಕಚೇರಿ ಹಾಗೂ ಗುಜರಾತ್ ವಿವಿಯ ಮಾಹಿತಿ ಅಧಿಕಾರಿಗಳಿಗೆ ಸೂಚಿಸಿದ್ದ ಮುಖ್ಯ ಮಾಹಿತಿ ಆಯೋಗದ ಆದೇಶವನ್ನು ಬದಿಗೆ ಸರಿಸಿದ ಗುಜರಾತ್ ಹೈಕೋರ್ಟ್. ಆರ್ ಟಿಐ ಅಡಿ ಮಾಹಿತಿ ಕೋರಿದ್ದ ಕೇಜ್ರಿವಾಲ್’ಗೆ ರೂ. 25 ಸಾವಿರ ದಂಡ ವಿಧಿಸಿದೆ.

ಧಾನ ಮಂತ್ರಿ ನರೇಂದ್ರ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಮಾಹಿತಿ ಹಕ್ಕು ಕಾಯಿದೆ ಅಡಿ ಒದಗಿಸುವ ಅಗತ್ಯವಿಲ್ಲ ಎಂದು ಶುಕ್ರವಾರ ಗುಜರಾತ್‌ ಹೈಕೋರ್ಟ್‌ ಆದೇಶಿಸಿದೆ.

ಮೋದಿ ಪದವಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಮತ್ತು ಗುಜರಾತ್‌ ಹಾಗೂ ದೆಹಲಿ ವಿಶ್ವವಿದ್ಯಾಲಯಗಳಿಗೆ ಆದೇಶಿಸಿದ್ದ ಮುಖ್ಯ ಮಾಹಿತಿ ಆಯೋಗದ ಆದೇಶವನ್ನು ನ್ಯಾಯಮೂರ್ತಿ ಬಿರೇನ್‌ ವೈಷ್ಣವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಬದಿಗೆ ಸರಿಸಿದೆ.

ಅಲ್ಲದೆ, ಪ್ರಧಾನಿ ಮೋದಿಯವರ ಪದವಿ ಪ್ರಮಾಣ ಪತ್ರ ಮಾಹಿತಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗೆ ನ್ಯಾಯಾಲಯವು 25,000 ರೂ. ದಂಡ ಹಾಕಿದೆ.

Join Whatsapp
Exit mobile version