Home ಟಾಪ್ ಸುದ್ದಿಗಳು ಭಾರತೀಯ ಉದ್ದಿಮೆಗೆ ಹಿನ್ನಡೆ: ಗೂಗಲ್

ಭಾರತೀಯ ಉದ್ದಿಮೆಗೆ ಹಿನ್ನಡೆ: ಗೂಗಲ್

ನವದೆಹಲಿ: ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್ ಗೆ ₹ 1,337 ಕೋಟಿ ದಂಡ ವಿಧಿಸಿರುವುದರಿಂದ ಭಾರತೀಯ  ಗ್ರಾಹಕರಿಗೆ ಮತ್ತು ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪೆನಿಯ ವಕ್ತಾರರು, ಸಿಸಿಐ ನಿರ್ಧಾರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆ್ಯಂಡ್ರಾಯ್ಡ್ ನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ವಿಶ್ವಾಸ ಹೊಂದಿರುವ ಭಾರತೀಯರಿಗೆ ಗಂಭೀರವಾದ ಸುರಕ್ಷತಾ ಅಪಾಯಗಳು ಎದುರಾಗಲಿವೆ. ಭಾರತೀಯರಿಗೆ ಮೊಬೈಲ್ ಸಾಧನಗಳ ಮೇಲಿನ ವೆಚ್ಚವು ಹೆಚ್ಚಾಗಲಿದೆ ಎಂದು ಹೇಳಿದರು.

ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಗೂಗಲ್ ಕಂಪನಿಗೆ ಸಿಸಿಐ ದಂಡ ವಿಧಿಸಿತ್ತು.

Join Whatsapp
Exit mobile version