Home ಟಾಪ್ ಸುದ್ದಿಗಳು ಮಧ್ಯಪ್ರದೇಶ: ಟ್ರಕ್ ಗೆ ಬಸ್ ಡಿಕ್ಕಿ: 14 ಸಾವು, 40 ಮಂದಿಗೆ ಗಾಯ

ಮಧ್ಯಪ್ರದೇಶ: ಟ್ರಕ್ ಗೆ ಬಸ್ ಡಿಕ್ಕಿ: 14 ಸಾವು, 40 ಮಂದಿಗೆ ಗಾಯ

ಭೋಪಾಲ್: ಬಸ್ಸೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 14 ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರೆವಾ ಜಿಲ್ಲೆಯ ಸುಹಾಸಿ ಪಹರಿ ಬಳಿ ನಡೆದಿದೆ.

ತಡರಾತ್ರಿ ಆಂಧ್ರ ಪ್ರದೇಶದ ಹೈದರಾಬಾದ್ ನಿಂದ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

40 ಮಂದಿ ಗಾಯಗೊಂಡಿದ್ದು, ಈ ಪೈಕಿ 20 ಜನರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಸ್ ಹೈದರಾಬಾದ್ ನಿಂದ ಗೋರಖ್ ಪುರಕ್ಕೆ ತೆರಳುತ್ತಿದ್ದು, ಬಸ್ಸಿನಲ್ಲಿದ್ದವರೆಲ್ಲರೂ ಉತ್ತರ ಪ್ರದೇಶದ ನಿವಾಸಿಗಳು ಎಂದು ರೇವಾ ಪೊಲೀಸ್ ಅಧೀಕ್ಷಕ (ಎಸ್ಪಿ) ನವನೀತ್ ಭಾಸಿನ್ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Join Whatsapp
Exit mobile version