Home ಟಾಪ್ ಸುದ್ದಿಗಳು ಸೀರಮ್ ಸಂಸ್ಥೆಯಿಂದ ಕೇಂದ್ರಕ್ಕೆ 2 ಕೋಟಿ ಉಚಿತ ಕೋವಿಡ್ ಶೀಲ್ಡ್ ಲಸಿಕೆ

ಸೀರಮ್ ಸಂಸ್ಥೆಯಿಂದ ಕೇಂದ್ರಕ್ಕೆ 2 ಕೋಟಿ ಉಚಿತ ಕೋವಿಡ್ ಶೀಲ್ಡ್ ಲಸಿಕೆ

ನವದೆಹಲಿ: ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮುಂಜಾಗ್ರತಾ ಕ್ರಮವಾಗಿ ಎರಡು ಕೋಟಿ ಡೋಸ್ ಕೋವಿಡ್ ಶೀಲ್ಡ್ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ನೀಡಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಸೀರಮ್ ಇನ್ ಸ್ಟಿಟ್ಯೂಟ್ ನ ಸರ್ಕಾರಿ ಮತ್ತು ನಿಯಂತ್ರಕ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು 410 ಕೋಟಿ ರೂಪಾಯಿ ಮೌಲ್ಯದ ಡೋಸ್ ಗಳನ್ನು ಉಚಿತವಾಗಿ ನೀಡುವುದಾಗಿ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ರೋಗನಿರೋಧಕ ಲಸಿಕಾ ಕಾರ್ಯಕ್ರಮಕ್ಕಾಗಿ ಸೀರಂ ಸಂಸ್ಥೆಯು ಇದುವರೆಗೆ 170 ಕೋಟಿಗೂ ಹೆಚ್ಚು ಕೋವಿಶೀಲ್ಡ್ ಲಸಿಕೆಯನ್ನು ಸರ್ಕಾರಕ್ಕೆ ಒದಗಿಸಿದೆ.

ಕೆಲವು ದೇಶಗಳಲ್ಲಿ COVID-19 ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ  ಹಲವು ಎಚ್ಚರಿಕೆ ಸಂದೇಶಗಳನ್ನು ನೀಡಿದ್ದು,  ಯಾವುದೇ ಪರಿಸ್ಥಿತಿಯಲ್ಲೂ  ಸಿದ್ಧರಾಗಿರುವಂತೆ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

Join Whatsapp
Exit mobile version