ಜಾರಕಿಹೊಳಿ ಸೆಕ್ಸ್ ಹಗರಣ | ಸಿಡಿಯಲ್ಲಿದ್ದ ಯುವತಿಗಾಗಿ ಪೊಲೀಸರಿಂದ ಪಿಜಿಗಳಲ್ಲಿ ಶೋಧ

Prasthutha|

- Advertisement -

ಬೆಂಗಳೂರು: ಕಬ್ಬನ್‌ ಪಾರ್ಕ್‌ ಹಾಗೂ ಆರ್‌ಟಿ ನಗರದ ಪೊಲೀಸರು ರಮೇಶ್ ಜಾರಕಿಹೊಳಿ ಸೆಕ್ಸ್‌ ಹಗರಣಕ್ಕೆ ಸಂಬಂಧಿಸಿ ಸಿಡಿಯಲ್ಲಿ ಕಂಡು ಬಂದಿರುವ ಯುವತಿಗಾಗಿ ಆರ್‌ಟಿ ನಗರದಲ್ಲಿರುವ ಸುಮಾರು 45ಕ್ಕೂ ಹೆಚ್ಚು ಮಹಿಳಾ ಪಿಜಿಗಳಲ್ಲಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.


ಜಾರಕಿಹೊಳಿಯೊಂದಿಗೆ ಚಕ್ಕಂದವಾಡುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವತಿ ಆರ್‌ಟಿ ನಗರದ ಪಿಜಿಯಲ್ಲಿ ವಾಸವಿರುವ ಯುವತಿ ಎನ್ನಲಾಗಿದೆ.

- Advertisement -

ಇದಲ್ಲದೇ ದಿನೇಶ್ ಕಲ್ಲಹಳ್ಳಿ ಕೂಡ ವಿಡಿಯೋಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ನೀಡುವ ವೇಳೆಯಲ್ಲಿ, ಯುವತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲಿಲ್ಲ. ಪೊಲೀಸರಿಗೆ ಸಿಕ್ಕಿರುವ ಮಾಹಿತಿಯನ್ನೇ ಆಧಾರವನ್ನಾಗಿ ಇಟ್ಟುಕೊಂಡು ಕಬ್ಬನ್‌ ಪಾರ್ಕ್‌ ಹಾಗೂ ಆರ್‌ಟಿ ನಗರದ ಪೊಲೀಸರು ಕಳೆದ ಎರಡು ದಿನದಿಂದ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಮಹಿಳಾ ಪಿಜಿಗೆ ದಾಖಲಾಗಿರುವ ಎಲ್ಲರ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

Join Whatsapp
Exit mobile version