ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ತಂಡದಿಂದ ಧಾರವಾಡ ಕೋಳಿಕೇರಿ ಕೊಳಚೆ ಪ್ರದೇಶಕ್ಕೆ ಭೇಟಿ

Prasthutha|

ಹುಬ್ಬಳ್ಳಿ : ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್(SDTU) ಹುಬ್ಬಳ್ಳಿ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಧಾರವಾಡ ನಗರದ ಕೋಳಿಕೇರಿ ಕೊಳಚೆ ಪ್ರದೇಶದಲ್ಲಿ ವಾಸಿಸುವ ಕಾರ್ಮಿಕರ ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಭೆ ನಡೆಸಲಾಯಿತು. SDTU ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್ ಮಾತನಾಡಿ, ಸರಕಾರಿ ಸೌಲಭ್ಯ ವಂಚಿತ ಕಾರ್ಮಿಕರೊಂದಿಗೆ SDTU ನಿರಂತರ ಕಾನೂನು ಹೋರಾಟ ನಡೆಸಲಿದೆ ಎಂದು ಭರವಸೆ ನೀಡಿದರು.

- Advertisement -


ಈ ಸಂದರ್ಭದಲ್ಲಿ SDTU ಜಿಲ್ಲಾಧ್ಯಕ್ಷರಾದ ಇರ್ಷಾದ್ ಅಹ್ಮದ್ ರಿತ್ತಿ, ಉಪಾಧ್ಯಕ್ಷರಾದ ಫಯಾಜ್ ಅಹ್ಮದ್ ಕೆ, ಪ್ರಧಾನ ಕಾರ್ಯದರ್ಶಿಯಾದ ಫಕ್ರುದ್ದಿ ನ್ ಶೇಖ್ ಹಾಗೂ ಜಿಲ್ಲಾ ಸಮಿತಿ ಸದಸ್ಯರು ಮತ್ತು ಧಾರವಾಡ ಕೋಳಿಕೇರಿ ಚಿಸ್ತಿಯಾ ಮಸೀದಿಯ ಅಧ್ಯಕ್ಷರಾದ ನಿಜಾಮುದ್ದೀನ್ ಮುಲ್ಲಾ ಮತ್ತು ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.

Join Whatsapp
Exit mobile version