-50 ಲಕ್ಷ ಪರಿಹಾರ ನೀಡುವಂತೆ ಆಗ್ರಹ
ಮೈಸೂರು: ಏಳು ಜನ ದುಷ್ಕರ್ಮಿಗಳು ಕ್ಷುಲ್ಲಕ ಕಾರಣಗಳಿಗೋಸ್ಕರ ಸದಾಕತುಲ್ಲಾ ಖಾನ್ ಎಂಬ ವ್ಯಕ್ತಿಯನ್ನು ನಿಯೋಜಿತ ರೂಪದಲ್ಲಿ ಕೊಲೆಗೈದ ಘಟನೆಯನ್ನು ಎಸ್ ಡಿ ಪಿ ಐ ತೀವ್ರವಾಗಿ ಖಂಡಿಸಿದೆ. ಹಾಗೂ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ ಐ ಎ) ವಹಿಸುವಂತೆ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.
ಶಾಂತಿನಗರದ ನಿವಾಸಿ ಸದಾಕತ್ ಖಾನ್ ನನ್ನು ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಕೊಲೆಯ ಹಿಂದಿನ ಸಂಚನ್ನು ಬಹಿರಂಗಪಡಿಸಿ, ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣವನ್ನು ಎನ್ ಐ ಎ ಗೆ ವಹಿಸಬೇಕು ಎಂದು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ʼಸದಾಕತ್ ತಂದೆ ಬಾಲ್ಯದಲ್ಲೇ ಮರಣ ಹೊಂದಿದ್ದು, ತಾಯಿ ಮತ್ತು ಕುಟುಂಬ ಸದಾಕತ್ ದುಡಮೆಯಿಂದ ಮುಂದೆ ಸಾಗುತ್ತಿತ್ತು. ಅನ್ಯಾಯವಾಗಿ ಕೊಲೆ ಮಾಡಿದ ಸದಾಕತ್ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ಧನ ಘೋಷಣೆ ಮಾಡಬೇಕುʼ ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ ಗುರುವಾರ ಮೈಸೂರಿನ ಇಟ್ಟಿಗೆ ಗೂಡು ನಿವಾಸಿಗಳಾದ ನಿತಿನ್ , ಭಾಸ್ಕರ್, ವಿಘ್ನೇಶ್ ಸೇರಿದಂತೆ ಏಳು ಜನರು ಸಿಗರೇಟ್ ಸೇದುವ ವಿಚಾರದಲ್ಲಿ ನಡೆದ ಗಲಭೆಯೊಂದನ್ನು ನೆಪವಾಗಿರಿಸಿಕೊಂಡು ಸದಾಕತ್ ಖಾನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದರು.