Home ಕರಾವಳಿ ಮಂಗಳೂರು ಟಗ್ ದುರಂತ | ಮೃತರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ ಪರಿಹಾರ ಒದಗಿಸಲು...

ಮಂಗಳೂರು ಟಗ್ ದುರಂತ | ಮೃತರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ ಪರಿಹಾರ ಒದಗಿಸಲು SDPI ಆಗ್ರಹ

►‘ಮುನ್ಸೂಚನೆ ಇದ್ದರೂ ಸಮುದ್ರಕ್ಕೆ ಸಿಬ್ಬಂದಿಗಳಿಗೆ ಇಳಿಯಲು ಅನುಮತಿ ನೀಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ’

ಮಂಗಳೂರು : ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಹಾವಳಿಯಿಂದಾಗಿ ನಡೆದ ಟಗ್ ದುರಂತದಲ್ಲಿ ಮಡಿದ ಕುಟುಂಬಗಳಿಗೆ ಘೋಷಿಸಿರುವ 10 ಲಕ್ಷ ದಿಂದ  25 ಲಕ್ಷ ರೂ ತನಕ ಪರಿಹಾರ ಒದಗಿಸಬೇಕೆಂದು SDPI ಆಗ್ರಹಿಸಿದೆ.

ಅದೇ ರೀತಿಯಲ್ಲಿ ಮನೆ ಮಠ ಕಳೆದುಕೊಂಡವರಿಗೆ ಈಗಾಗಲೇ ಘೋಷಿಸಿರುವ ಐದು ಲಕ್ಷದಿಂದ ಹತ್ತು ಲಕ್ಷ ರೂಪಾಯಿಗೆ ಏರಿಸಬೇಕು,ತುರ್ತು ಪರಿಹಾರ ಮೊತ್ತವಾಗಿ ಘೋಷಿಸಿರುವ 10 ಸಾವಿರ ರುಪಾಯಿ ಗಳಿಂದ 25 ಸಾವಿರ ರುಪಾಯಿಗಳಿಗೆ ಏರಿಸಿ ಅದನ್ನು ಶೀಘ್ರವಾಗಿ ಕೊಡುವ ನಿಟ್ಟಿನಲ್ಲಿ ದ.ಕ ಜಿಲ್ಲಾಡಳಿತ ಮತ್ತು ಸರ್ಕಾರ ಕಾರ್ಯ ಪ್ರವೃತರಾಗಬೇಕೆಂದು ಪಕ್ಷ ಆಗ್ರಹಿಸಿದೆ.

ಅದೇ ರೀತಿಯಲ್ಲಿ ತೌಕ್ತೆ ಚಂಡಮಾರುತದ ಬಗ್ಗೆ ಒಂದು ದಿನ ಮುಂಚಿತವಾಗಿಯೇ ಹವಾಮಾನ ಇಲಾಖೆ ಎಚ್ಚರಿಸಿತ್ತು. ಮತ್ತು ವಾಯುಪಡೆ ಹಾಗೂ ನೌಕಾಪಡೆಯ ಸಿಬ್ಬಂದಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಚಂಡಮಾರುತದ ಗಂಭೀರತೆಯ ಬಗ್ಗೆ ಎಚ್ಚರಿಕೆಯ ಸಂದೇಶಗಳನ್ನು ಸಮುದ್ರ ಮಾರ್ಗದಲ್ಲಿ ಮೈಕ್ ಮೂಲಕ ಎಚ್ಚರಿಕೆ ನೀಡಿ ಎಲ್ಲಾ ಟಗ್ ಗಳು ಮೀನುಗಾರರು ಸಮುದ್ರ ದಡಕ್ಕೆ ಬರಬೇಕೆಂದು ಸೈರನ್ ಮೊಳಗಿಸಿ ಅಪಾಯದ ಕರೆಗಂಟೆಯನ್ನು ಬಾರಿಸಿತ್ತು.

ಆದರೆ ಇದನ್ನು ಮೀರಿ ದುರಂತಕ್ಕೀಡಾದ ಟಗ್ ಗಳಿಗೆ ಸಮುದ್ರಕ್ಕಿಳಿಯಲು ಅನುಮತಿ ನೀಡಿದವರು ಯಾರು? ಎಂಬುದರ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕು.

ಮಂಗಳೂರಿನಲ್ಲಿ ಕಂದಾಯ ಸಚಿವರು ನಡೆಸಿದ  ಎಂ.ಆರ್.ಪಿ.ಎಲ್ ಮತ್ತು ಎನ್.ಎಂ.ಪಿ.ಟಿ ಅಧಿಕಾರಿಗಳ  ಸಭೆಯಲ್ಲಿ ಈ ಎರಡೂ ಕಂಪನಿಗಳ ಹಿರಿಯ ಅಧಿಕಾರಿಗಳು ಈ ದುರಂತದ ಬಗ್ಗೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿ ತಮ್ಮ ತಪ್ಪನ್ನು ಮರೆಮಾಚಲು ಯತ್ನಿಸುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದೆ.

ಹಾಗಾಗಿ ಈ ಪ್ರಕರಣದಲ್ಲಿ ಯಾರು ತಪ್ಪಿತಸ್ತರಿದ್ದಾರೋ ಅವರ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎಸ್‌ಡಿಪಿಐ ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version