Home ಕರಾವಳಿ ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಸದಸ್ಯೆಯ ತಂಡದಿಂದ ಹಲ್ಲೆ: ಎಸ್‌ ಡಿಪಿಐ ತೆಕ್ಕಾರು ಗ್ರಾಮ ಸಮಿತಿ...

ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಸದಸ್ಯೆಯ ತಂಡದಿಂದ ಹಲ್ಲೆ: ಎಸ್‌ ಡಿಪಿಐ ತೆಕ್ಕಾರು ಗ್ರಾಮ ಸಮಿತಿ ಖಂಡನೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ತೆಕ್ಕಾರು ಗ್ರಾ.ಪಂ ಪಿಡಿಒ ಸುಮಯ್ಯಾ ಹಾಗೂ ಗ್ರಾ.ಪಂ ಸ್ವಚ್ಛತಾ ಗಾರ್ತಿ ಪ್ರಮೀಳಾ ಮೇಲೆ ಹಲ್ಲೆ, ಸರಕಾರಿ ಸೊತ್ತು ನಾಶ, ನಗದು ದರೋಡೆ ಹಾಗೂ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಶೀಘ್ರದಲ್ಲಿ ಬಂಧನ ಮಾಡಬೇಕು ಎಂದು ಎಸ್‌ ಡಿಪಿಐ ತೆಕ್ಕಾರು ಗ್ರಾಮ ಸಮಿತಿ ಅಧ್ಯಕ್ಷರಾದ ನಝೀರ್ ಬಾಜಾರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾ.ಪಂ ಸದಸ್ಯೆ ಯಮುನಾ, ಅವರ ಪುತ್ರ ನವೀನ್ ನಾಯ್ಕ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಸಾಲಿಯಾನ್ ಎಂಬವರೇ ಕೃತ್ಯವೆಸಗಿದವರೆಂದು ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿದೆ ಅವರನ್ನು ಶೀಘ್ರದಲ್ಲಿ ಬಂಧನ ಮಾಡಬೇಕು ಮತ್ತು ಒತ್ತುವರಿಯದ ಸರ್ಕಾರಿ ಕಟ್ಟಡವನ್ನು ಮರಳಿ ಪಂಚಾಯತ್ ಗೆ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ  ಐಪಿಸಿ ಸೆಕ್ಷನ್ 109, 504, 323, 506, 354, 353, 392, 34, 2(A) ಮೊದಲಾದ ದಂಡ ಸಂಹಿತೆಯಂತೆ ಕ್ರಿಮಿನಲ್ ಕೃತ್ಯ, ನಿಂದನೆ, ಮಾನಭಂಗ ಯತ್ನ, ಸರಕಾರಿ ಕರ್ತವ್ಯಕ್ಕೆ ಅಡ್ಡಿ, ದರೋಡೆ, ಸರಕಾರಿ ಸೊತ್ತು ನಾಶ, ಇತ್ಯಾಧಿಯಡಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧನ ಮಾಡಬೇಕು ಇಲ್ಲವಾದಲ್ಲಿ ತೆಕ್ಕಾರು ಗ್ರಾಮಸ್ಥರನ್ನು ಸೇರಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುದು ಎಂದು ತಿಳಿಸಿದ್ದಾರೆ.

Join Whatsapp
Exit mobile version