Home ಟಾಪ್ ಸುದ್ದಿಗಳು ನಿಲ್ಲಿಸಿದ್ದ ಸರ್ಕಾರಿ ಬಸ್ ಚಲಾಯಿಸಿ ಡಿವೈಡರ್ ಮೇಲೆ ಹತ್ತಿಸಿದ ಕುಡುಕ !

ನಿಲ್ಲಿಸಿದ್ದ ಸರ್ಕಾರಿ ಬಸ್ ಚಲಾಯಿಸಿ ಡಿವೈಡರ್ ಮೇಲೆ ಹತ್ತಿಸಿದ ಕುಡುಕ !

ಬೀದರ್: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ನಿಂತಿದ್ದ ಸರ್ಕಾರಿ ಬಸ್ ಅನ್ನು ಚಲಾಯಿಸಿ, ನಿಲ್ದಾಣದಿಂದ ಹೊರಗಿರುವ ಡಿವೈಡರ್ ಮೇಲೆ ಹತ್ತಿಸಿದ ಘಟನೆ ಔರಾದ್ ಪಟ್ಟಣದಲ್ಲಿ ನಡೆದಿದೆ.


ಬೀದರ್ ಗೆ ಹೋಗಲು ಬಸ್ ಚಾಲಕ ರಾಜು ಎಂಬುವವರು ಔರಾದ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ನಿಯಂತ್ರಣಾಧಿಕಾರಿ ಬಳಿ ಅನುಮತಿ ಪಡೆಯಲು ಹೋಗಿದ್ದರು. ಈ ವೇಳೆ ಬಸ್ ನಲ್ಲಿ ಕುಳಿತ ಕರಂಜಿ (ಕೆ) ಗ್ರಾಮದ ಯಶೆಪ್ಪ ಹಣಮಂತ ಸೂರ್ಯವಂಶಿ ಎನ್ನುವ ಪ್ರಯಾಣಿಕ ಚಾಲಕನಂತೆ ಸಿನಿಮಾ ರೀತಿಯಲ್ಲಿ ಬಸ್ ಓಡಿಸಿದ್ದಾನೆ. ಈ ವೇಳೆ ಬಸ್ ನಿಯಂತ್ರಣ ಕಳೆದುಕೋಂಡು ಡಿವೈಡರ್ ಮೇಲೆ ಹತ್ತಿದೆ. ಬಸ್ ನಲ್ಲಿರುವ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಡಿಕ್ಕಿಯಾಗುತ್ತಿದ್ದಂತ್ತೆ ಯಶಪ್ಪ ಸೂರ್ಯವಂಶಿ ಓಡಿ ಹೋಗುವಾಗ ಸಾರ್ವಜನಿಕರ ಸಹಾಯದಿಂದ ಆತನನ್ನು ಹಿಡಿದು ಔರಾದ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

Join Whatsapp
Exit mobile version