Home ಕರಾವಳಿ ದಿನಬಳಕೆ ಆಹಾರದ ಮೇಲೆ ತೆರಿಗೆ ಹೇರಿಕೆ ಎಸ್.ಡಿ.ಪಿ.ಐ ವತಿಯಿಂದ ಬೆಳ್ಳಾರೆಯಲ್ಲಿ ಪ್ರತಿಭಟನೆ

ದಿನಬಳಕೆ ಆಹಾರದ ಮೇಲೆ ತೆರಿಗೆ ಹೇರಿಕೆ ಎಸ್.ಡಿ.ಪಿ.ಐ ವತಿಯಿಂದ ಬೆಳ್ಳಾರೆಯಲ್ಲಿ ಪ್ರತಿಭಟನೆ

ಬೆಳ್ಳಾರೆ :ಮೋದಿ ಸರಕಾರದ ಅಸಂಬದ್ಧ ಮತ್ತು ಜನ ವಿರೋಧಿಯಾದ GST ತೆರಿಗೆ ಹೇರಿಕೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಬೆಳ್ಳಾರೆ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಸ್ ಡಿ ಪಿ ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಅವೈಜ್ಞಾನಿಕವಾಗಿ ಜಿ.ಎಸ್.ಟಿ ಯನ್ನು ಕುಡಿಯುವ ನೀರು, ಹಾಲು, ಮಜ್ಜಿಗೆ, ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಹೇರಿಕೆ ಮಾಡಿ ಬಡ ಜನಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿ ಕಾರ್ಪೊರೇಟ್ ಕುಳಗಳನ್ನು ಪೊಷಿಸುತ್ತಿದೆ ಎಂದು ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಸ್ ಡಿಪಿಐ ಸುಳ್ಯ ಕ್ಷೇತ್ರ ಸಮಿತಿ ಕಾರ್ಯದರ್ಶಿ ರಫೀಕ್ ಎಂ.ಎ ಪ್ರಾಸ್ತಾವಿಕ ಮಾತನಾಡಿದರು.

ಸರಕಾರದ ಜಿ.ಎಸ್.ಟಿ ತೆರಿಗೆಯ ವಿರುದ್ಧ ಭಾರಿ ಘೋಷಣೆಗಳನ್ನು ಕೂಗುವುದರ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ನೌಫಲ್. ಟಿ.ಎ, ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಶಾಹಿದ್ ಎಮ್ ಮತ್ತಿತರರು ಉಪಸ್ಥಿತರಿದ್ದರು.

ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ಹಮೀದ್ ಮರಕ್ಕಡ ಸ್ವಾಗತಿಸಿ, ಗ್ರಾಮ ಸಮಿತಿ ಕಾರ್ಯದರ್ಶಿ ಜಾಬೀರ್ ಸಿ.ಎಂ ವಂದಿಸಿದರು.

Join Whatsapp
Exit mobile version