Home ಕರಾವಳಿ ಝೈನುದ್ದೀನ್ ಹತ್ಯೆ ಯತ್ನ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಎಸ್ ಡಿ ಪಿ ಐಯಿಂದ ಕುಂಬಳೆ ಠಾಣೆಗೆ...

ಝೈನುದ್ದೀನ್ ಹತ್ಯೆ ಯತ್ನ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಎಸ್ ಡಿ ಪಿ ಐಯಿಂದ ಕುಂಬಳೆ ಠಾಣೆಗೆ ಪ್ರತಿಭಟನಾ ಮಾರ್ಚ್

ಮಂಜೇಶ್ವರ: ಝೈನುದ್ದೀನ್ ಹತ್ಯಾ ಯತ್ನದ ಆರೋಪಿಗಳು ಪೊಲೀಸರ ಕಣ್ಣೆದುರಿನಲ್ಲೇ ಓಡಾಡುತ್ತಿದ್ದರೂ ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಎಸ್ ಡಿ ಪಿ ಐ ಮಂಜೇಶ್ವರ ವಲಯ ಸಮಿತಿ ವತಿಯಿಂದ ಶುಕ್ರವಾರ ಕುಂಬಳೆ ಪೊಲೀಸ್ ಠಾಣೆಗೆ ಪ್ರತಿಭಟನಾ ಮಾರ್ಚ್ ನಡೆಸಲಾಯಿತು.


ಎಸ್ ಡಿ ಪಿ ಐ ಜಿಲಾಧ್ಯಕ್ಷ ಮುಹಮ್ಮದ್ ಪಾಕಿಯಾಲ ಪ್ರತಿಭಟನಾ ಮಾರ್ಚ್ ಉದ್ದೇಶಿಸಿ ಮಾತನಾಡಿ, ಆರಿಕ್ಕಾಡಿ ಕಡವತ್ತ್ ಎಸ್ ಡಿ ಪಿ ಐ ಬ್ರಾಂಚ್ ಅಧ್ಯಕ್ಷನಾಗಿದ್ದ ಝೈನುದ್ದೀನ್ ಎಂಬ ಯುವಕನನ್ನು ಹತ್ಯೆಗೆ ಯತ್ನಿಸಿದ ಆರೋಪಿಗಳನ್ನು ಪೊಲೀಸರು ಈ ತನಕ ಬಂಧಿಸದೇ ಇರುವುದು ಖಂಡನೀಯ. ಆರೊಪಿಗಳಿಗೆ ಸಂರಕ್ಷಣೆ ನೀಡುತ್ತಿರುವ ಪೊಲೀಸರಿಗೆ ಕೆಲವೊಂದು ರಾಜಕೀಯ ನೇತಾರರ ಒತ್ತಡ ಇದೆ. ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದೆ. ಮುಂದಿನ ದಿನಗಳಲ್ಲಿ ಆರೋಪಿಯನ್ನು ಬಂಧಿಸದೇ ಇದ್ದರೆ ಎಸ್ ಪಿ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳುವುದಾಗಿ ತಿಳಿಸಿದರು.


ಅಶ್ರಫ್ ಬಡಾಜೆ, ಮುಬಾರಕ್ ಕಡಂಬಾರ್, ಶರೀಫ್ ಪಾವೂರು, ಅಲಿಶಾಂ, ಅನ್ವರ್, ನಾಸಿರ್ ಬಂಬ್ರಾಣ ಮೊದಲಾದವರು ಭಾಗವಹಿಸಿದ್ದರು.

Join Whatsapp
Exit mobile version