Home ಕರಾವಳಿ ಮಂಗಳೂರು: ಪೊಲೀಸ್ ನಿಂದನೆಯ ವೀಡಿಯೋವನ್ನು ತಿರುಚಿ ವಾಟ್ಸಾಪ್ ಸ್ಟೇಟಸ್ ಹಾಕಿದ ಪೊಲೀಸ್ ಸಿಬ್ಬಂದಿಯ ವಿರುದ್ಧ SDPI...

ಮಂಗಳೂರು: ಪೊಲೀಸ್ ನಿಂದನೆಯ ವೀಡಿಯೋವನ್ನು ತಿರುಚಿ ವಾಟ್ಸಾಪ್ ಸ್ಟೇಟಸ್ ಹಾಕಿದ ಪೊಲೀಸ್ ಸಿಬ್ಬಂದಿಯ ವಿರುದ್ಧ SDPI ದೂರು

ಪೊಲೀಸರು: ಪೊಲೀಸರನ್ನು ನಿಂದಿಸಿದ್ದಾರೆ ಎನ್ನಲಾದ ವೀಡಿಯೋವನ್ನು ತಿರುಚಿ ಪೊಲೀಸ್ ಸಿಬ್ಬಂದಿಯೋರ್ವ ತನ್ನ ವಾಟ್ಸಾಪ್ ಸ್ಟೇಟಸ್ಸಿನಲ್ಲಿ ಹಾಕಿರುವುದರ ವಿರುದ್ಧ ಎಸ್ ಡಿಪಿಐ ಮಂಗಳೂರು ನಗರದ ವತಿಯಿಂದ ಉಪ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಲಾಗಿದೆ.

ಕಾವೂರು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ರಾಘವ ವಿರುದ್ಧ ದೂರು ನೀಡಲಾಗಿದೆ. ಪೊಲೀಸರ ವಿರುದ್ಧ ಘೋಷಣೆ ಕೂಗಲಾಗಿದೆ ಎನ್ನಲಾದ ವೀಡಿಯೋವನ್ನು ತಿರುಚಿ ತನ್ನ ಸ್ಟೇಟಸ್ ನಲ್ಲಿ ಸಿಬ್ಬಂದಿ ಹಾಕಿರುವುದನ್ನು ನೋಡಿದ ಎಸ್ ಡಿಪಿಐ ಕಾರ್ಯಕರ್ತ ಮುಹಮ್ಮದ್ ಶರೀಫ್ ಅವರು ಈ ಸಂಬಂಧ ಸ್ಟೇಟಸ್ ಅಪ್ಲೋಡ್ ಮಾಡಿದ ದಾಖಲೆಯೊಂದಿಗೆ ಆಯುಕ್ತರಿಗೆ ದೂರನ್ನು ನೀಡಿದ್ದಾರೆ.

ಎಸ್ಡಿಪಿಐ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕೆಲವೊಂದು ಯುವಕರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಬಂಧಿಸಲಾಗಿತ್ತು. ಈ ಕುರಿತಾದ ವೀಡಿಯೋವನ್ನು ತಿರುಚಿ ಸಿಬ್ಬಂದಿ ರಾಘವ, ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ. ಈ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ನಿಷ್ಪಕ್ಷಪಾತ ವಾಗಿ ಕಾರ್ಯನಿರ್ವಹಿಸ ಬೇಕಾಗಿದ್ದ ಸಿಬ್ಬಂದಿಯ ವರ್ತನೆಯು ಪೂರ್ವಗ್ರಹ ಪೀಡಿತ ಮತ್ತು ಕಾನೂನು ಬಾಹಿರವಾಗಿದೆ ಎಸ್ ಡಿಪಿಐ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Join Whatsapp
Exit mobile version