ಬೆಂಗಳೂರು: ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಮಾಡಿರುವ ಅಶ್ಲೀಲ, ಮಹಿಳಾ ದ್ವೇಷಿ ಮತ್ತು ಅತ್ಯಾಚಾರ ಸಮರ್ಥನೆಯ ಪೋಸ್ಟ್ ವೈರಲ್ ಆಗಿದ್ದು, ಇದು ವಿವಾದವಾಗುತ್ತಿದ್ದಂತೆ ಚಕ್ರತೀರ್ಥ ಅವರು ತನ್ನ ಫೇಸ್ ಬುಕ್, ಟ್ವಿಟ್ಟರ್ ಖಾತೆಗಳನ್ನು ಲಾಕ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯ ಮತ್ತು ಬಿಜೆಪಿಯ ಪರವಾಗಿ ನಿರಂತರ ಹೀನಾಯ ಮಟ್ಟದ ಟ್ರೋಲ್ ಮಾಡಿ ಕುಖ್ಯಾತಿ ಹೊಂದಿದ ರೋಹಿತ್ ಅವರನ್ನು ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ನೇಮಿಸಿತ್ತು. ಇದಕ್ಕೆ ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು ಮತ್ತು ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಮಧ್ಯೆ ರೋಹಿತ್ ಅವರನ್ನು ಪಠ್ಯ ಪರಿಷ್ಕರಣಾ ಸಮಿತಿಯಿಂದ ಕೈಬಿಡಬೇಕೆಂದು ಕರ್ನಾಟಕದ ಹಲವು ಸಾಹಿತಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.
ಸದ್ಯ ವಿವಾದಾತ್ಮಕ ಟ್ವೀಟ್ ಮತ್ತು ಫೇಸ್ ಬುಕ್ ಪೋಸ್ಟ್ ವೈರಲ್ ಆಗಿ ಜನರಿಂದ ವ್ಯಾಪಕ ವ್ಯಕ್ತವಾಗುತ್ತಿದ್ದಂತೆ ರೋಹಿತ್ ಚಕ್ರತೀರ್ಥ ಅವರು ತನ್ನ ಟ್ವಿಟ್ಟರ್, ಫೇಸ್ ಬುಕ್ ಖಾತೆಯನ್ನೇ ಲಾಕ್ ಮಾಡಿದ್ದಾರೆ.