Home ಟಾಪ್ ಸುದ್ದಿಗಳು ಸಬಿಯಾ ಸೈಫಿ ಅತ್ಯಾಚಾರ, ಹತ್ಯೆ: ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಎಸ್ ಡಿಪಿಐ ನಿಯೋಗ

ಸಬಿಯಾ ಸೈಫಿ ಅತ್ಯಾಚಾರ, ಹತ್ಯೆ: ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಎಸ್ ಡಿಪಿಐ ನಿಯೋಗ

ನವದೆಹಲಿ: ದೆಹಲಿಯ ಸಂಗಮ್ ವಿಹಾರದಲ್ಲಿ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಸಬಿಯಾ ಸೈಫಿ ಎಂಬ ಯುವತಿಯ ಕುಟುಂಬವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ರಾಷ್ಟ್ರೀಯ ನಿಯೋಗ ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿತು.


ದೆಹಲಿ ಸಿವಿಲ್ ಡಿಫೆನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷ ಪ್ರಾಯದ ಮುಸ್ಲಿಮ್ ಯುವತಿ ಸಬಿಯಾ ಸೈಫಿ ಅವರನ್ನು ದೆಹಲಿಯ ಸಂಗಮ್ ವಿಹಾರ್ ದಿಂದ ಆಗಸ್ಟ್ 26ರಂದು ಅಪಹರಿಸಿ, ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಂತ್ರಸ್ತೆಯನ್ನು ಆಕೆಯ ಕೆಲಸದ ಸ್ಥಳದಿಂದ ಆಗಸ್ಟ್ 26 ರ ಸಂಜೆ ಅಪಹರಿಸಿ ಫರೀದಾಬಾದ್ ಗೆ ಕರೆದೊಯ್ದು ಅಲ್ಲಿ ಅತ್ಯಾಚಾರವೆಸಗಿ ಇರಿದು ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.


ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಈ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ ಡಿಪಿಐ ನಿಯೋಗ ತಿಳಿಸಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಸಂತ್ರಸ್ತ ಕುಟುಂಬಕ್ಕೆ ಎಲ್ಲಾ ರೀತಿಯ ಕಾನೂನು ನೆರವು ನೀಡಲಾಗುವುದು ಎಂದು ನಿಯೋಗ ಭರವಸೆ ನೀಡಿದೆ.


ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಸಂತ್ರಸ್ತ ಕುಟುಂಬಕ್ಕೆ ಎಲ್ಲಾ ರೀತಿಯ ಕಾನೂನು ನೆರವು ನೀಡಲಾಗುವುದು ಎಂದು ನಿಯೋಗ ಭರವಸೆ ನೀಡಿದೆ. ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಮೈಸೂರು, ಇಲ್ಯಾಸ್ ತುಂಬೆ, ಕಾರ್ಯದರ್ಶಿ ಡಾ. ತಸ್ಲೀಮ್ ರಹ್ಮಾನಿ, ಉಪಾಧ್ಯಕ್ಷ ದಹ್ಲಾನ್ ಬಾಖವಿ ನಿಯೋಗದಲ್ಲಿದ್ದರು.

Join Whatsapp
Exit mobile version