Home ಟಾಪ್ ಸುದ್ದಿಗಳು ಬೆಂಗಳೂರು-ಮೈಸೂರು ಹೆದ್ದಾರಿಯ 40% ಪಥ ಕಮಿಷನ್ ರೂಪದಲ್ಲಿ ಸರಕಾರದ ಪಾಲಾಗಿದೆಯೇ?: ಅಬ್ದುಲ್ ಲತೀಫ್ ಪ್ರಶ್ನೆ

ಬೆಂಗಳೂರು-ಮೈಸೂರು ಹೆದ್ದಾರಿಯ 40% ಪಥ ಕಮಿಷನ್ ರೂಪದಲ್ಲಿ ಸರಕಾರದ ಪಾಲಾಗಿದೆಯೇ?: ಅಬ್ದುಲ್ ಲತೀಫ್ ಪ್ರಶ್ನೆ

ಮಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯ 40% ಪಥ ಕಮಿಷನ್ ರೂಪದಲ್ಲಿ ಡಬಲ್ ಇಂಜಿನ್ ಸರಕಾರದ ಪಾಲಾಗಿದೆಯೇ? ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ BJP ಮತ್ತು ಪ್ರಧಾನಮಂತ್ರಿ ಮೋದಿಯವರು ದಶಪಥ ಎಂದು ಹೇಳುತ್ತಿದ್ದಾರೆ, NHAI ಹೊರಡಿಸಿರುವ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಆರು ಪಥ ಎಂದು ನಮೂದಿಸಲಾಗಿದೆ. ಉಳಿದ 40% ಪಥ ಕಾಣುತ್ತಿಲ್ಲ. 40% ಪಥ ಕಮಿಷನ್ ರೂಪದಲ್ಲಿ ಡಬಲ್ ಇಂಜಿನ್ ಸರಕಾರದ ಪಾಲಾಗಿದೆಯೇ ? ಜನತೆಗೆ ಉತ್ತರಿಸಬೇಕಾಗಿದೆ ಎಂದು ಕೇಳಿಕೊಂಡಿದ್ದಾರೆ.

Join Whatsapp
Exit mobile version