ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್ ವೇಯಲ್ಲಿ ಪ್ರಯಾಣದ ದರ ಹೆಚ್ಚಳ ಮಾಡಿ ಕೆಎಸ್ಆರ್ಟಿಸಿ ಮಂಗಳವಾರ ಪ್ರಕಟಣೆ ಹೊರಡಿಸಿದೆ. ವೋಲ್ವೋ ಹಾಗೂ ಸಾಮಾನ್ಯ ಬಸ್ಗಳಿಗೆ ಪ್ರತ್ಯೇಕವಾಗಿ ದರ ಪರಿಷ್ಕರಣೆ ಮಾಡಲಾಗಿದೆ. ಐಷಾರಾಮಿ ಬಸ್ಗಳ ಪ್ರಯಾಣ ದರ 20 ರೂ. ಸಾಮಾನ್ಯ ಬಸ್ ಪ್ರಯಾಣದ ದರ 15 ರೂ. ಹಾಗೂ ರಾಜಹಂಸ ಬಸ್ಗಳ ಪ್ರಯಾಣ ದರವನ್ನು 18 ರೂ. ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಬಸ್ಗಳ ಏಕಮುಖ ಸಂಚಾರಕ್ಕೆ 460 ರೂ, ಎರಡು ಕಡೆ ಸಂಚಾರಕ್ಕೆ 690 ರೂ, ಬಸ್ಗಳ ತಿಂಗಳ ಟೋಲ್ ಪಾಸ್ ದರ 15,325 ರೂ. ನಿಗದಿಯಾಗಿದೆ.
ತೀವ್ರ ವಿರೋಧದ ನಡುವೆಯೂ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳವಾರ ಬೆಳಿಗ್ಗೆಯಿಂದ ಮೊದಲ ಹಂತದ ಟೋಲ್ ಸಂಗ್ರಹ ಆರಂಭಿಸಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇದೀಗ ಈ ಹೊರೆಯನ್ನು ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ವರ್ಗಾಯಿಸಿಲು ಮುಂದಾಗಿದೆ.