Home ಟಾಪ್ ಸುದ್ದಿಗಳು SDPI ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಸುವರ್ಣ ನ್ಯೂಸ್ ನ ರವಿ ಹೆಗಡೆ, ಅಜಿತ್ ಹನುಮಕ್ಕನವರ್...

SDPI ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಸುವರ್ಣ ನ್ಯೂಸ್ ನ ರವಿ ಹೆಗಡೆ, ಅಜಿತ್ ಹನುಮಕ್ಕನವರ್ ಗೆ ಛಾಟಿ ಬೀಸಿದ ನ್ಯಾಯಾಲಯ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ವೇಳೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಪ್ರಕರಣದಲ್ಲಿ “ಸುವರ್ಣ” ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹಾಗೂ ನಿರೂಪಕ ಅಜಿತ್ ಹನುಮಕ್ಕನವರ್ ಅವರನ್ನು ನ್ಯಾಯಾಲಯ ತರಾಟೆ ತೆಗೆದುಕೊಂಡಿದ್ದು, ಷರತ್ತುಬದ್ಧ ಜಾಮೀನು ನೀಡಿದೆ.


ಎಸ್ ಡಿಪಿಐ ಪಕ್ಷದ ವಿರುದ್ಧ ಇವರಿಬ್ಬರೂ ಪೂರ್ವಗ್ರಹ ಪೀಡಿತರಾಗಿ ದುರುದ್ದೇಶದಿಂದ ಸುದ್ದಿ ಪ್ರಕಟಿಸಿ, ಸಮಾಜದಲ್ಲಿ ಕೋಮುದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಎಸ್ ಡಿಪಿಐ ಬೆಂಗಳೂರಿನ 1ನೆ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಅವರಿಬ್ಬರನ್ನೂ ತರಾಟೆಗೆ ತೆಗೆದುಕೊಂಡು, 3000 ರೂ.ಠೇವಣಿ ಇರಿಸಿ, 20000 ರೂ. ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ಡಿಪಿಐ, ಇದು ನಮ್ಮ ಕಾನೂನು ಹೋರಾಟಕ್ಕೆ ಸಂದ ಜಯ ಎಂದು ತಿಳಿಸಿದೆ.

Join Whatsapp
Exit mobile version