Home ಕರಾವಳಿ ದ.ಕ. ಜಿಲ್ಲೆಯಲ್ಲಿ ಉಂಟಾಗಿರುವ ಕೃತಕ ಮರಳು ಅಭಾವವನ್ನು ಪರಿಹರಿಸಿ ಸಾರ್ವಜನಿಕರಿಗೆ ಸುಲಭವಾಗಿ ಮರಳು ದೊರೆಯುವಂತೆ ಸಮಗ್ರ...

ದ.ಕ. ಜಿಲ್ಲೆಯಲ್ಲಿ ಉಂಟಾಗಿರುವ ಕೃತಕ ಮರಳು ಅಭಾವವನ್ನು ಪರಿಹರಿಸಿ ಸಾರ್ವಜನಿಕರಿಗೆ ಸುಲಭವಾಗಿ ಮರಳು ದೊರೆಯುವಂತೆ ಸಮಗ್ರ ಮರಳು ನೀತಿಯನ್ನು ಜಾರಿಗೆ ತರಲು ಎಸ್‌’ಡಿಪಿಐ ಒತ್ತಾಯ

ಮಂಗಳೂರು: ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃತಕ ಮರಳು ಅಭಾವ ತಲೆದೂರಿದ್ದು, ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ಜನ ಪ್ರತಿನಿಧಿ ಮತ್ತು ನಾಯಕರ ರಾಜಕೀಯ ಹಗ್ಗಜಗ್ಗಾಟದಿಂದ ಜಿಲ್ಲೆಯಲ್ಲಿ ಮರಳು ಅಭಾವ ಸೃಷ್ಟಿಯಾಗಿದೆ. ಇದರಿಂದ ಸಾರ್ವಜನಿಕ ಕೆಲಸಗಳು ಸೇರಿದಂತೆ ಖಾಸಗಿ ಕಟ್ಟಡ ನಿರ್ಮಾಣಗಳು ಸ್ಥಗಿತಗೊಂಡಿದೆ. ಕಳೆದ ಐದಾರು ತಿಂಗಳಿನಿಂದ ಜಿಲ್ಲೆಯಲ್ಲಿ ಮರಳಿನ ದರ ಹೆಚ್ಚಲವಾಗುತ್ತಿದೆ. ಇದನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ಮಿತದರದಲ್ಲಿ ಮರಳು ಸಿಗುವಂತೆ ಸಮಗ್ರ ಮರಳು ನೀತಿಯನ್ನು ಜಾರಿಗೆ ತರಬೇಕೆಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ಜನಪ್ರತಿನಿಧಿಗಳ ಚೇಲಾಗಳ ನಿಯಂತ್ರಣದಲ್ಲಿರುವ ಜಿಲ್ಲೆಯ ಮರಳುಗಾರಿಕೆ ಇಂದು ನಾಯಕರ ಮತ್ತು ಜನಪ್ರತಿನಿಧಿಗಳ ರಾಜಕೀಯರ ವೈಶಮ್ಯದಿಂದ ಜನ ಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ. ಈ ಸಂಧರ್ಭವನ್ನು ದುರುಪಯೋಗ ಪಡಿಸಿಕೊಂಡು ಕೆಲವು ಪ್ರಭಾವಿಗಳು ಅಕ್ರಮವಾಗಿ ದುಬಾರಿ ಬೆಲೆಗೆ ಈಗಲೂ ಮರಳು ವ್ಯಾಪಾರ ಮಾಡುತ್ತಿದ್ದಾರೆ. ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಅಕ್ರಮವಾಗಿ ಮರಳುಗಾರಿಕೆ ನಡೆಸುವ ಮರಳು ಮಾಫಿಯವನ್ನು ಸರಕಾರ ನಿಯಂತ್ರಿಸಬೇಕು. ಕಾನೂನು ರೀತಿಯಲ್ಲಿ ಸರಕಾರಕ್ಕೆ ರಾಜಧನ ಪಾವತಿಸಿ ಮುಕ್ತವಾದ ಮರಳುಗಾರಿಕೆ ನಡೆಸುವ ನಿಟ್ಟಿನಲ್ಲಿ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ರವರು ಮಾಡಿದ ರೀತಿಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಆಗ್ರಹಿಸುತ್ತದೆ. ಪ್ರಕೃತಿ ಮತ್ತು ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ನದಿಯ ಆಳದಿಂದ ತೆಗೆಯುವ ಮರಳುಗಾರಿಕೆಯನ್ನು ಸರಕಾರ ತಡೆಹಿಡಿಯಬೇಕು. ರಾತ್ರಿ ಹೊತ್ತುಗಳಲ್ಲಿ ಅಕ್ರಮವಾಗಿ ನಡೆಸುವ ಮರಳು ಸಾಗಾಟವನ್ನು ತಡೆಯಲು ಸರಕಾರ ಆಯಾಕಟ್ಟಿನ ಜಾಗದಲ್ಲಿ ಚೆಕ್ ಪೋಸ್ಟ್ ಮಾಡಿ ಅಧಿಕಾರಿಗಳ ವಿಶೇಷ ತಂಡಗಳನ್ನು ನೇಮಿಸಬೇಕು ಮತ್ರು ಜಿಲ್ಲಾಡಳಿತ ಅತೀ ಶ್ರೀಘ್ರದಲ್ಲಿ ಮರಳುಗಾರಿಗೆಕೆ ನೀತಿ ರೂಪಿಸಬೇಕು ಎಂದು ಅಶ್ರಫ್ ಅಡ್ಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version