Home ಕರಾವಳಿ ಇನಾಯತ್ ಅಲಿ ಅಭಿಮಾನಿ ಬಳಗ ವತಿಯಿಂದ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ...

ಇನಾಯತ್ ಅಲಿ ಅಭಿಮಾನಿ ಬಳಗ ವತಿಯಿಂದ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಇನಾಯತ್ ಅಲಿ ಅಭಿಮಾನಿ ಬಳಗ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಲಯನ್ಸ್ ಕ್ಲಬ್ ಮುಚ್ಚೂರು-ನೀರುಡೆ ಘಟಕ ಇದರ ಸಹಯೋಗದೊಂದಿಗೆ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಇನಾಯತ್ ಅಲಿ ರವರ ಹುಟ್ಟು ಹಬ್ಬದ ಪ್ರಯುಕ್ತ ಡಿ.19 ಮಂಗಳವಾರ ಝಾರಾ ಕನ್ವೆನ್ಷನ್ ಸೆಂಟರ್, ಗಂಜೀಮಠದಲ್ಲಿ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಜನಸ್ಪಂದನಾ ಕಾರ್ಯಕ್ರಮದಲ್ಲಿ ಲಭ್ಯವಿರುವ ಸೌಲಭ್ಯಗಳು:

➤ಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂ ಶ್ರೀನಿವಾಸ್ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ➤ಪ್ರಸಾದ್ ನೇತ್ರಾಲಯ ಮಂಗಳೂರು ಇವರ ಸಹಯೋಗದೊಂದಿಗೆ ಅತ್ಯಾಧುನಿಕ ಉಪಕರಣಗಳ ಜೊತೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ ➤ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತಾದನ ಶಿಬಿರವು ನಡೆಯಲಿದೆ. ➤ಗೃಹಲಕ್ಷ್ಮೀ ಯೋಜನೆಯ ಅರ್ಜಿಗಳ ಸ್ಥಿತಿ ಪರಿಶೀಲನೆ ಹಾಗೂ ಪರಿಹಾರ ➤ಉಚಿತವಾಗಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ತಿದ್ದುಪಡಿ, ಆಯುಷ್ಮಾನ್ ಕಾರ್ಡ್, ಅಬಾ ಕಾರ್ಡ್, ಪಿಂಚಣಿ ಯೋಜನೆ, ವಿಧವಾ ವೇತನ ಯೋಜನೆ, ಅಂಗವಿಕಲರ ಕಾರ್ಡ್, ಸಂದ್ಯಾ ಸುರಕ್ಷಾ, ಕಿಸಾನ್ ಸಮ್ಮಾನ್ ಹಾಗೂ ಇತರ ಯೋಜನೆಗಳಿಗೆ ಉಚಿತವಾಗಿ ನೋಂದಣಿ ಮಾಡಿಕೊಡಲಾಗುವುದು.

Join Whatsapp
Exit mobile version