Home ಟಾಪ್ ಸುದ್ದಿಗಳು VHP ಮನೆಮನೆಗೆ ಸಾವರ್ಕರ್ ಭಾವಚಿತ್ರ ಅಳವಡಿಸುವುದನ್ನು ಸರ್ಕಾರ ತಡೆಯಬೇಕು : SDPI ಆಗ್ರಹ

VHP ಮನೆಮನೆಗೆ ಸಾವರ್ಕರ್ ಭಾವಚಿತ್ರ ಅಳವಡಿಸುವುದನ್ನು ಸರ್ಕಾರ ತಡೆಯಬೇಕು : SDPI ಆಗ್ರಹ

ಬಂಟ್ವಾಳ: ಮಂಚಿಯ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ವಿಡಿ ಸಾವರ್ಕರ್ ಗೆ ಜೈಕಾರ ಹಾಕಿರುವುದನ್ನು ಖಂಡಿಸಿದ್ದ ಎಸ್‌ ಡಿ ಪಿ ಐ ನಡೆಗೆ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಎಸ್ ಡಿ ಪಿ ಐ ತಿರುಗೇಟು ನೀಡಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡಲು VHP ಗೆ ನೈತಿಕತೆ ಇಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಡಿ ಸಾವರ್ಕರ್ ಪಾತ್ರ ಶೂನ್ಯ. ರೌಡಿ ಶೀಟರ್ ,ಕೊಲೆ ಆರೋಪಿಗಳೇ ವಿಡಿ ಸಾರ್ವರ್ಕರ್ ಬಗ್ಗೆ ಮಾತನಾಡಬೇಕಷ್ಟೇ ಎಂದು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಮೂನಿಷ್ ಆಲಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

VHP ಯು ಹೇಡಿ ಸಾವರ್ಕರ್ ನ ಭಾವಚಿತ್ರಗಳನ್ನು ಮನೆ ಮನೆಗೆ ಅಳವಡಿಸಲು ಹೊರಟಿರುವುದು ಹಾಸ್ಯಾಸ್ಪದ ಹಾಗೂ ಖಂಡನೀಯ ಎಂದಿರುವ ಅವರು ಸಹೋದರತೆ, ಸಾಮರಸ್ಯದಿಂದ ಕೂಡಿರುವ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು VHP ಹೊರಟಿದೆ. ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ಅವಕಾಶವನ್ನು ಕಲ್ಪಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಸಾರ್ವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಸ್ವಾತಂತ್ರ್ಯದ ಗಳಿಸುವಿಕೆಗೆ ಧಕ್ಕೆ ಉಂಟಾದ ವ್ಯಕ್ತಿ ಎಂಬುವುದು ಇತಿಹಾಸದಲ್ಲಿ ಜಗಜ್ಜಾಹೀರಾಗಿದೆ. ಇಂತಹವರ ಭಾವಚಿತ್ರವನ್ನು ಮನೆ ಮನೆಗೆ ಹಂಚಿದರೆ ಬೆಳೆಯುವ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಆತ್ಮಸ್ಥೈರ್ಯ ತುಂಬುವ ವಿಚಾರಗಳನ್ನು ಮಕ್ಕಳು ಮನೆಗಳಲ್ಲಿ ನೋಡಿ ಬೆಳೆಯ ಬೇಕೇ ಹೊರತು, ದೇಶದ್ರೋಹ ಕೆಲಸ ಮಾಡಿ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದು, ಅವರ ಪಿಂಚಣಿಯಿಂದ ಬದುಕಿದ ಹೇಡಿಯೊಬ್ಬನ ನೋಡಿ ಬೆಳೆಯ ಬೇಕಿರುವುದಲ್ಲ ಎಂದು ಮೂನಿಷ್ ಆಲಿ ಟೀಕಿಸಿದ್ದಾರೆ.

ಎಲ್ಲಾ ಮನೆಯವರು ಎಚ್ಚರಗೊಂಡು ಸಂಘಟಿತರಾಗಿ ವಿಶ್ವ ಹಿಂದೂ ಪರಿಷತ್ ಸಮಾಜವನ್ನು ಒಡೆಯುವ ದುರಾಲೋಚನೆಯಿಂದ ಆಯೋಜಿಸಿರುವ ಸಾವರ್ಕರ್ ಭಾವಚಿತ್ರದ ಅಳವಡಿಕೆಯನ್ನು ಬಹಿಷ್ಕರಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Join Whatsapp
Exit mobile version