Home ಟಾಪ್ ಸುದ್ದಿಗಳು ಹೂವಿನ ಗಿಡಗಳ ಜೊತೆ ಗಾಂಜಾ ಗಿಡ ಬೆಳೆದ ಆರೋಪಿ ಬಂಧನ

ಹೂವಿನ ಗಿಡಗಳ ಜೊತೆ ಗಾಂಜಾ ಗಿಡ ಬೆಳೆದ ಆರೋಪಿ ಬಂಧನ

ಮೈಸೂರು: ಮನೆಯ ಆವರಣದಲ್ಲೇ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ್ ಬಂಧಿತ ಆರೋಪಿಯಾಗಿದ್ದಾನೆ. ಮನೆ ಆವರಣದಲ್ಲಿದ್ದ ಹೂವಿನ ಗಿಡಗಳ ನಡುವೆ ಆರೋಪಿ ಎರಡು ಗಾಂಜಾ ಗಿಡಗಳನ್ನು ಬೆಳೆಸಿದ್ದನು.

ಆರೋಪಿ ವಿಶ್ವನಾಥ್ ತನ್ನ ಮನೆಯ ಆವರಣದಲ್ಲಿ ಹೂವಿನ ಗಿಡಗಳನ್ನು ನೆಟ್ಟಿದ್ದಲ್ಲದೆ, ಇದರ ನಡುವೆ ಎರಡು ಗಾಂಜಾ ಗಿಡಗಳನ್ನು ಕೂಡ ಬೆಳೆಸಿದ್ದನು. ಈ ಗಿಡಗಳು ಸುಮಾರು 5 ರಿಂದ 6 ಅಡಿ ಎತ್ತರ ಬೆಳೆದಿದ್ದವು. ಮಾಹಿತಿ ತಿಳಿದ ಹುಣಸೂರು ಗ್ರಾಮಾಂತರ ಠಾಣಾ ಪೊಲೀಸರು, ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 6 ಕೆಜಿಯಷ್ಟಿದ್ದ ಎರಡು ಗಾಂಜಾ ಹಸಿ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version