Home ಕರಾವಳಿ ಉಮ್ಮನ್ ಚಾಂಡಿ ನಿಧನಕ್ಕೆ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂತಾಪ

ಉಮ್ಮನ್ ಚಾಂಡಿ ನಿಧನಕ್ಕೆ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂತಾಪ

ಮಂಗಳೂರು: ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನಕ್ಕೆ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕೇರಳದಲ್ಲಿ ವಿದ್ಯಾರ್ಥಿ ಸಂಘಟನೆಗಳ ನಾಯಕತ್ವದ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿ  1970 ರಿಂದ 2023 ರ ವರೆಗೆ ಸುದೀರ್ಘ  53 ವರ್ಷಗಳ ಕಾಲ ಕೇರಳದ ಪುದುಪಳ್ಳಿ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗಿ ಕೇರಳ ಸರಕಾರದ ಸಚಿವ ಸಂಪುಟದಲ್ಲಿ ಉನ್ನತ ಖಾತೆಗಳನ್ನು ನಿರ್ವಹಿಸಿ  ಎರಡು ಸಲ ಕೇರಳದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿ ನಿರ್ವಹಿಸಿದ ,ಸದಾ ಹಸನ್ಮುಖಿ ವ್ಯಕ್ತಿತ್ವದ, ಜನರ ಮಧ್ಯೆ ಹೆಚ್ಚಿನ ಸಮಯ ತೊಡಗಿಸಿಕೊಂಡ ಹಿರಿಯ ಮುತ್ಸದ್ದಿ ರಾಜಕಾರಣಿ ಉಮ್ಮನ್ ಚಾಂಡಿ ಯವರ ನಿದನವು ಕೇರಳ ಸೇರಿದಂತೆ ರಾಷ್ಟ್ರೀಯ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ . ಯಾವುದೇ ಸಂದಿಗ್ಧ ಪರಿಸ್ಥಿತಿಯನ್ನು. ನಗುಮುಖ ಹಾಗೂ ಸಮಚಿತ್ತದಿಂದ ಎದುರಿಸುವ ಚಾಂಡಿಯವರ ವ್ಯಕ್ತಿತ್ವವು ರಾಜಕೀಯ ವಿರೋದಿಗಳನ್ನು ಕೆಲವೊಂದು ಸಲ ಮೌನವಾಗಿಸುತ್ತಿತ್ತು , ಇಂತಹ ಹಿರಿಯ ,ಅನುಭವಿ ನಾಯಕತ್ವವನ್ನು ಕಳೆದುಕೊಂಡ ಕೇರಳ ರಾಜಕೀಯ ಕ್ಷೇತ್ರ ಇಂದು ಅನಾಥವಾಗಿದೆ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ ಇವರ ಅಗಲುವಿಕೆಯ ದುಖಃವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಸಂತಾಪ ಪ್ರಕಟಣೆಯಲ್ಲಿ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ತಿಳಿಸಿದ್ದಾರೆ.

Join Whatsapp
Exit mobile version