Home ಟಾಪ್ ಸುದ್ದಿಗಳು ವಸಂತ ಬಂಗೇರಾ ನಿಧನಕ್ಕೆ ಎಸ್ಡಿಪಿಐ ಸಂತಾಪ

ವಸಂತ ಬಂಗೇರಾ ನಿಧನಕ್ಕೆ ಎಸ್ಡಿಪಿಐ ಸಂತಾಪ

ಬೆಳ್ತಂಗಡಿ: ಮಾಜಿ ಶಾಸಕ ಕೆ. ವಸಂತ ಬಂಗೇರಾ ನಿಧನಕ್ಕೆ ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಹಿರಿಯ ರಾಜಕಾರಣಿಗಳು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ. ವಸಂತ ಬಂಗೇರ ಅವರ ನಿಧನದ ಸುದ್ದಿ ನೋವು ತಂದಿದೆ. ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಸರಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ ಕೆ. ವಸಂತ ಬಂಗೇರ ಅವರ ಅಗಲುವಿಕೆ ರಾಜಕೀಯ ಕ್ಷೇತ್ರಕ್ಕೆ ಹಾಗೂ ಬೆಳ್ತಂಗಡಿ ಜನತೆಗೆ ತುಂಬಲಾರದ ನಷ್ಟ. ರಾಜ್ಯದ ಸಚೇತಕರಾಗಿ, ಶಾಸಕರಾಗಿ ಅವರು ಸಲ್ಲಿಸಿದ ಸೇವೆ ಸದಾ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ ಎಂದು ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನವಾಝ್ ಕಟ್ಟೆ ತಿಳಿಸಿದ್ದಾರೆ.

Join Whatsapp
Exit mobile version