ಮಡಿಕೇರಿ: ದ್ವಿ ಚಕ್ರ ವಾಹನ ಮತ್ತು ಪಿಕ್ ಅಪ್ ನಡುವೆ ಡಿಕ್ಕಿ ಸಂಭವಿಸಿ ನೇರುಗಳಲೆ ಸರಕಾರಿ ಶಾಲಾ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಕೂಡಿಗೆ ಸಮೀಪದ ಹುಲುಸೆ ಬಳಿ ನಡೆದಿದೆ.
ಅಶ್ವಿನಿ (45) ಮೃತ ದುರ್ದೈವಿ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಸಹ ಕಾರ್ಯದರ್ಶಿ HS ಚೇತನ್ ರವರ ಧರ್ಮ ಪತ್ನಿಯಾದ ಅಶ್ವಿನಿ ನೇರುಗಳಲೆ ಸರ್ಕಾರಿ ಶಾಲಾ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ.