Home ಟಾಪ್ ಸುದ್ದಿಗಳು ಝಕಿಯಾ ಜಾಫ್ರಿ ಪ್ರಕರಣದಲ್ಲಿ ಸುಪ್ರೀಮ್ ತೀರ್ಪು ತೀವ್ರ ನಿರಾಶೆ ತಂದಿದೆ: ಕಾಂಗ್ರೆಸ್

ಝಕಿಯಾ ಜಾಫ್ರಿ ಪ್ರಕರಣದಲ್ಲಿ ಸುಪ್ರೀಮ್ ತೀರ್ಪು ತೀವ್ರ ನಿರಾಶೆ ತಂದಿದೆ: ಕಾಂಗ್ರೆಸ್

ನವದೆಹಲಿ: 2002ರ ಗುಜರಾತ್ ನಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಮ್ ಕೋರ್ಟ್’ನ ತೀರ್ಪು ತೀವ್ರ ನಿರಾಶೆಯನ್ನು ತಂದಿದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.

ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರನ್ನು ಖುಲಾಸೆಗೊಳಿಸಿದ ವಿಶೇಷ ತನಿಖಾ ತಂಡದ ವರದಿಯನ್ನು ಕಾಂಗ್ರೆಸ್’ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಅವರು ಪ್ರಶ್ನಿಸಿ ಸುಪ್ರೀಮ್ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದರು.

ಫೆಬ್ರವರಿ 28, 2002 ರಂದು ಅಹಮದಾಬಾದ್’ನ ಗುಲ್ಬರ್ಗ ಸೊಸೈಟಿಯಲ್ಲಿ ಸಂಘಪರಿವಾರದ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ್ದಾಗ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು 69 ಮಂದಿ ಹತ್ಯೆಯಾಗಿದ್ದರು. ಅಲ್ಲದೆ ಈ ಹತ್ಯಾಕಾಂಡದಲ್ಲಿ 2000 ಕ್ಕೂ ಅಧಿಕ ಸಂಖ್ಯೆಯ ಮುಸ್ಲಿಮರನ್ನು ಹತ್ಯೆಗೈಯ್ಯಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

Join Whatsapp
Exit mobile version