ಮಂಗಳೂರು: ಕೃಷ್ಣಾಪುರ ಮದರಸದಿಂದ ಮನೆಗೆ ಹೋಗುವ ದಾರಿ ಮದ್ಯೆ ಕೃಷ್ಣಾಪುರ ಆರನೇ ಬ್ಲಾಕ್ ನಲ್ಲಿ ಮದರಸ ವಿದ್ಯಾರ್ಥಿ ಮೇಲೆ ಹಲ್ಲೆಗೈದ ಘಟನೆ ಖಂಡನೀಯ. ಮಕ್ಕಳ ಮೇಲೂ ದೌರ್ಜನ್ಯಗೆಯ್ಯುವ ಪುಂಡರನ್ನು ಕಠಿಣ ಕಾನೂನು ಕ್ರಮದ ಮೂಲಕ ಜೈಲಿಗೆ ಅಟ್ಟಬೇಕು ಎಂದು ಪಾಪ್ಯುಲರ್ ಫ್ರಂಟ್ ಮಂಗಳೂರು ನಗರದ ಅದ್ಯಕ್ಷರಾದ ಖಾದರ್ ಕಲಾಯಿ ಪೋಲಿಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಮಕ್ಕಳ ಮೇಲೆ ಉತ್ತರಭಾರತದಲ್ಲಿ ಕಂಡು ಬರುವ ದೌರ್ಜನ್ಯಗಳು, ಗುಂಪು ಹಿಂಸೆಗಳು ಇದೀಗ ದಕ್ಷಿಣಕ್ಕೂ ವ್ಯಾಪಿಸಿದ್ದು ಆತಂಕಕಾರಿಯಾಗಿದೆ. ಮದರಸದಿಂದ ಮನೆಗೆ ಹೋಗುವ ದಾರಿ ಮದ್ಯೆ ದುಷ್ಕರ್ಮಿಗಳು ಹಲ್ಲೆ ನಡೆಸುವಾಗ ವಿದ್ಯಾರ್ಥಿ ಬೊಬ್ಬೆ ಹೊಡೆದ ಕಾರಣದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮುಸ್ಲಿಮ್ ಬಾಹುಳ್ಯವುಳ್ಳ ಪ್ರದೇಶದಲ್ಲೇ ದುಷ್ಕರ್ಮಿಗಳು ಹೊಂಚು ಹಾಕಿ ಹಲ್ಲೆ ನಡೆಸುವ ಹಿಂದಿರುವ ದುರುದ್ದೇಶವನ್ನು ಪೋಲಿಸ್ ಇಲಾಖೆ ತನಿಖೆಯಿಂದ ಬಹಿರಂಗಪಡಿಸಬೇಕಾಗಿದೆ ಎಂದು ಅಬೂಬಕರ್ ಒತ್ತಾಯಿಸಿದ್ದಾರೆ
ಈ ಘಟನೆಯಿಂದ ಜಿಲ್ಲೆಯಲ್ಲಿ ಶಾಂತಿಯಿಂದ ಜೀವಿಸುವ ಜನಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡಿದ್ದು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.