Home ಟಾಪ್ ಸುದ್ದಿಗಳು ತಕ್ಷಣ ಲೋನ್ ನೀಡುವ ಲಿಂಕ್ | ಕ್ಲಿಕ್ ಮಾಡಬೇಡಿ ಎಂದು ಎಚ್ಚರಿಸಿದ SBI

ತಕ್ಷಣ ಲೋನ್ ನೀಡುವ ಲಿಂಕ್ | ಕ್ಲಿಕ್ ಮಾಡಬೇಡಿ ಎಂದು ಎಚ್ಚರಿಸಿದ SBI

ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಾಲ ಅಗತ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಕೇವಲ 5 ನಿಮಿಷಗಳಲ್ಲಿ ಸಾಲ ಪಡೆಯಬಹುದು ಎಂಬ ಲಿಂಕ್‌ನೊಂದಿಗೆ ಸಂದೇಶ ಬಂದಾಗ ಅನೇಕ ಜನರು ಯೋಚಿಸದೆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಆದರೆ ನಂತರ ಅವರಿಗೆ ತಮ್ಮ ಬ್ಯಾಂಕ್ ಖಾತೆ ಖಾಲಿಯಾಗಿದೆ ಎಂಬ ವಿಚಾರ ಗಮನಕ್ಕೆ ಬರುತ್ತದೆ. ಅಂತಹ ಜನರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಚ್ಚರಿಕೆ ನೀಡಿದೆ.

ಬಳಕೆದಾರರು ತ್ವರಿತ ಸಾಲದ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ವಂಚಕರು ತಮ್ಮ ಖಾತೆಯಿಂದ ಹಣವನ್ನು ಪದೆದುಕೊಳ್ಳಬಹುದು ಎಂದು ಎಸ್‌ಬಿಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಎಚ್ಚರಿಸಿದೆ. ನಿಮ್ಮ ಮೊಬೈಲ್‌ನಲ್ಲಿ ಕೇವಲ ಐದು ನಿಮಿಷಗಳಲ್ಲಿ ಸಾಲ ಎಂಬ ಸಂದೇಶ ಬಂದಿದ್ದರೆ, ಅದನ್ನು ಕ್ಲಿಕ್ ಮಾಡಬೇಡಿ.
ಗ್ರಾಹಕರು ಸಾಲ ಪಡೆಯಲು ಬಯಸಿದರೆ ನೇರವಾಗಿ ಬ್ಯಾಂಕನ್ನು ಸಂಪರ್ಕಿಸಬೇಕು ಅಥವಾ ಅವರ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಬೇಕು. ಯಾವುದೇ ರೀತಿಯ ದಾಖಲೆಗಳನ್ನು ಡೌನ್‌ಲೋಡ್ ಮಾಡುವ ಅಥವಾ ನೀಡುವ ಮೊದಲು ಅಪ್ಲಿಕೇಶನ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಸಾಲ ವಿತರಣೆಯ ಬಗೆಗಿನ ಎಲ್ಲಾ ವಿವರಗಳನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ ಮತ್ತು ಸಾಲಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗ್ರಾಹಕರು ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಬಹುದು ಎಂದು ಎಸ್.ಬಿ.ಐ ತಿಳಿಸಿದೆ.

Join Whatsapp
Exit mobile version