ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಮುಗ್ಗರಿಸಿದ ಟೀಂ ಇಂಡಿಯಾ

Prasthutha|

ಬೊಲ್ಯಾಂಡ್ ಪಾರ್ಕ್‌: ಟೆಸ್ಟ್ ಸರಣಿಯ ಸೋಲಿನ ನೋವು ಮಾಸುವ ಮುನ್ನವೇ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಮುಗ್ಗರಿಸಿದೆ. ಪಾರ್ಲ್’ನ ಬೊಲ್ಯಾಂಡ್ ಪಾರ್ಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ನೀಡಿದ್ದ 297 ರನ್ ಗುರಿ ಬೆನ್ನತ್ತುವಲ್ಲಿ ವಿಫಲವಾದ  ಕೆ.ಎಲ್ ರಾಹುಲ್ ಸಾರಥ್ಯದ ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 265 ರನ್’ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ  31 ರನ್‌’ಗಳ ಅಂತರದಲ್ಲಿ ಹರಿಣ ಪಡೆಯ ಎದುರು ಶರಣಾಯಿತು.

- Advertisement -

ಸವಾಲಿ ಗುರಿ ಬೆನ್ನೆತ್ತುವ ವೇಳೆ ನಾಯಕ ರಾಹುಲ್ 12 ರನ್’ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಶಿಖರ್ ಧವನ್ ಆಕರ್ಷಕ 79 ರನ್’ಗಳಿಸಿ ನಿರ್ಗಮಿಸಿದರು. ನಾಯಕತ್ವ ತ್ಯಜಿಸಿ ಕೊಂಚ ರಿಲ್ಯಾಕ್ಸ್ ಆದಂತೆ ಕಂಡು ಬಂದ ವಿರಾಟ್ ಕೊಹ್ಲಿ 51 ರನ್’ಗಳಿಸಿದರೆ ಕೊನೆಯಲ್ಲಿ ಬಿರುಸಾಗಿ ಬ್ಯಾಟ್ ಬೀಡಿದಆಲ್’ರೌಂಡರ್ ಶಾರ್ದೂಲ್ ಠಾಕೂರ್ 50 ರನ್’ಗಳಿಸಿ ಅಜೇಯರಾಗುಳಿದರು. ದಕ್ಷಿಣ ಆಫ್ರಿಕಾ ಪರ ಲುಂಗಿ ನಿಂಗಿಡಿ, ತಬ್ರೇಝ್ ಶಮ್ಸಿ ಹಾಗೂ ಪೆಹ್ಲುಕ್’ವಾಯೋ ತಲಾ 2 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಅತಿಥೇಯ ಆಫ್ರಿಕಾ, ನಾಯಕ ತೆಂಬಾ ಬವುಮಾ ಹಾಗೂ ವೆನ್ ಡೆರ್ ಡೆಸ್ಸನ್ ಗಳಿಸಿದ ಭರ್ಜರಿ ಶತಕಗಳ ನೆರವಿನಿಂದ 4 ವಿಕೆಟ್ ನಷ್ಟದಲ್ಲಿ 296 ರನ್’ಗಳಿಸಿತ್ತು. ತೆಂಬಾ ಬವುಮಾ 110 ರನ್ ಹಾಗೂ ವೆನ್ ಡೆರ್ ಡೆಸ್ಸನ್ 129 ರನ್’ಗಳಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 2 ಹಾಗೂ ಆರ್. ಅಶ್ವಿನ್ 1 ವಿಕೆಟ್ ಪಡೆದರು. ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ 2ನೇ ಪಂದ್ಯ ಶುಕ್ರವಾರ  ಪಾರ್ಲ್’ನ ಬೊಲ್ಯಾಂಡ್ ಪಾರ್ಕ್‌ ಮೈದಾನದಲ್ಲಿ ನಡೆಯಲಿದೆ

Join Whatsapp
Exit mobile version