Home ಟಾಪ್ ಸುದ್ದಿಗಳು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಫೋಟೋ: ಆಕ್ರೋಶ ವ್ಯಕ್ತಪಡಿಸಿ ಫೋಟೋ ತೆಗೆಸಿದ ಎಸ್ ಡಿಪಿಐ

ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಫೋಟೋ: ಆಕ್ರೋಶ ವ್ಯಕ್ತಪಡಿಸಿ ಫೋಟೋ ತೆಗೆಸಿದ ಎಸ್ ಡಿಪಿಐ

ಬ್ರಿಟಿಷರ ಬೂಟು ನೆಕ್ಕಿದವರ ಫೋಟೋ ಹಾಕಬೇಡಿ ಎಂದ ಕಾರ್ಯಕರ್ತರು


ಶಿವಮೊಗ್ಗ: ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ದೇಶದ ಸ್ವಾತಂತ್ರ್ಯ ಹೋರಾಟಗಾರಿಗೆ ಅವಮಾನ ಮಾಡಿದ ವಿ.ಡಿ.ಸಾವರ್ಕರ್ ಚಿತ್ರವನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಹಾಕಿರುವುದಕ್ಕೆ ಎಸ್ ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಅದನ್ನು ತೆಗೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಭಾವಚಿತ್ರಗಳ ಮಧ್ಯದಲ್ಲಿ ಸಾವರ್ಕರ್ ಭಾವಚಿತ್ರವನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಎಸ್ ಡಿಪಿಐ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಸಿಟಿ ಸೆಂಟರ್ ಮಾಲ್ ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.


ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ, ಅವರ ಭಾವಚಿತ್ರ ಯಾಕೆ ಹಾಕಿದ್ದೀರಿ? ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಅವರ ಬೂಟು ನೆಕ್ಕಿದ ಸಾವರ್ಕರ್ ಹೇಗೆ ಸ್ವಾತಂತ್ರ ಹೋರಾಟಗಾರನಾಗಲು ಸಾಧ್ಯ. ಗಾಂಧೀಜಿಯವರ ಫೋಟೋವನ್ನು ಸಣ್ಣದಾಗಿ ಹಾಕಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಆಯೋಜಕರು ಸಾವರ್ಕರ್ ಫೋಟೋವನ್ನು ತೆಗೆದು ವಿವಾದಕ್ಕೆ ತೆರೆ ಎಳೆದರು.

Join Whatsapp
Exit mobile version